Advertisement
ಮಾವು-ಮುಲ್ತಾನಿ ಮಿಟ್ಟಿಚೆನ್ನಾಗಿ ಹಣ್ಣಾದ ಮಾವಿನ ಸಿಪ್ಪೆ ಸುಲಿದು ಅದರ ತಿರುಳಿಗೆ 2-3 ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ ಚೆನ್ನಾಗಿ ಕಲಸಿ. ಟೂತ್‌ಪೇಸ್ಟಿನ ಹದಕ್ಕೆ ಬಂದ ಮೇಲೆ ಅದನ್ನು ಮುಖಕ್ಕೆ ಹಚ್ಚಿ. ಇತರ ಫೇಸ್‌ಪ್ಯಾಕ್‌ಗಳಂತೆ ಇದು ಸುಲಭದಲ್ಲಿ ಒಣಗುವುದಿಲ್ಲ. 15 ನಿಮಿಷದ ನಂತರ ವೃತ್ತಾಕಾರವಾಗಿ ಮಸಾಜ್ ಮಾಡುತ್ತಾ ತಣ್ಣೀರಿನಿಂದ ಮುಖ ತೊಳೆಯಿರಿ. ಮುಖದ ಚರ್ಮ ಮೃದುವಾಗುವುದಲ್ಲದೆ, ಸಾಕಷ್ಟು ತೇವಾಂಶವೂ ಸಿಗುತ್ತದೆ.
ಮಧ್ಯಮ ಗಾತ್ರದ ಮಾವಿನ ಹಣ್ಣಿನ ತಿರುಳಿಗೆ, 8-9 ಬಾದಾಮಿ ಅರೆದು ಅದರ ಪೇಸ್ಟ್ ಅನ್ನು ಸೇರಿಸಿ. ಅದಕ್ಕೆ 2 ಚಮಚ ಹಾಲು, 2-3 ಚಮಚ ಓಟ್ಸ್ , 3 ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ. ಎಲ್ಲವನ್ನೂ ಒಟ್ಟಿಗೆ ಸೇರಿಸಿ ಅರೆದು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆಯಿರಿ. ಈ ಫೇಸ್‌ಪ್ಯಾಕ್ ಅನ್ನು ಎಲ್ಲ ರೀತಿಯ ಚರ್ಮದವರೂ ವಾರಕ್ಕೊಮ್ಮೆ ಬಳಸಬಹುದು. ಮಾವು-ಮೊಸರು-ರೋಸ್‌ವಾಟರ್
ಕಳಿತ ಮಾವಿನ ತಿರುಳಿಗೆ 3 ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ. ಅದಕ್ಕೆ ಒಂದು ಚಮಚ ಮೊಸರು, ಒಂದು ಚಮಚ ರೋಸ್ ವಾಟರ್ ಸೇರಿಸಿ ನುಣ್ಣಗಿನ ಪೇಸ್ಟ್ ಮಾಡಿ. ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖವನ್ನು ಸðಬ್ ಮಾಡಿ ತೊಳೆಯಿರಿ. ರೋಸ್‌ವಾಟರ್ ಬಳಸುವುದರಿಂದ ಈ ಫೇಸ್‌ಪ್ಯಾಕ್ ಸೂಕ್ಷ್ಮ ಚರ್ಮದವರಿಗೂ ಹೊಂದುತ್ತದೆ.
Related Articles
ಮಾವಿನ ಹಣ್ಣಿನ ತಿರುಳಿಗೆ ನಾಲ್ಕು ಚಮಚ ಕಡಲೆಹಿಟ್ಟು, ಬಾದಾಮಿ ಪುಡಿ, 1 ಚಮಚ ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಬಿಸಿಲಿಗೆ ಕಪ್ಪಾದ ಕುತ್ತಿಗೆ, ಮುಖ, ಕೈಗೆಲ್ಲ ಪೇಸ್ಟ್ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಬಿಸಿಲಿನಿಂದ ಕಪ್ಪಾದ ಚರ್ಮ ಸಹಜ ಬಣ್ಣಕ್ಕೆ ತಿರುಗುತ್ತದೆ.
Advertisement
ಮಾವು-ಕಂದು ಸಕ್ಕರೆಮಾವಿನ ತಿರುಳಿಗೆ ಎರಡು ಚಮಚ ಹಸಿಹಾಲು, ಜೇನುತುಪ್ಪ, ಅರ್ಧ ಕಪ್ ಕಂದು ಸಕ್ಕರೆ (ಸಾವಯವ ಬ್ರೌನ್ ಶುಗರ್) ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಆ ಪೇಸ್ಟ್ ಅನ್ನು ಮೈಗೆಲ್ಲಾ ಹಚ್ಚಿ , ಅರ್ಧ ಗಂಟೆ ಒಣಗಲು ಬಿಟ್ಟು ಅರೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಮೈಕಾಂತಿ ಹೆಚ್ಚುತ್ತದೆ.