ಕೋಲಾರ: ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಮತ್ತು ಶೀತಲ ಕೇಂದ್ರ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದು,ಬಜೆಟ್‌ನಲ್ಲಿ ಪ್ರಸ್ತಾಪಿಸುವುದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮುನಿರತ್ನ ತಿಳಿಸಿದರು.
ನಗರದ ಹೊರವಲಯದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಶನಿವಾರ ಜನಪರ ಉತ್ಸವ ಮತ್ತು ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಣ್ಣು, ತರಕಾರಿ ಬೆಳೆಯುವಲ್ಲಿ ಪ್ರಸಿದ್ಧಿ ಪಡೆದಿರುವ ಜಿಲ್ಲೆಯಲ್ಲಿ ರೈತರು ನಷ್ಟ ಹೊಂದುವುದನ್ನು ತಪ್ಪಿಸಬೇಕಿದೆ. ಮಾ. 4ರಂದು ಮಂಡನೆಯಾಗುವ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆದು ಒತ್ತಾಯಿಸಲಾಗಿದೆ. ಮಾಲೂರಿನಲ್ಲಿ 5 ಕೋಟಿ ವೆಚ್ಚದಲ್ಲಿ ಶೀತಲ ಕೇಂದ್ರ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಕೃಷಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಹೇಳಿದರು.
ಹಲವು ಯೋಜನೆ ಜಾರಿ: ನೆರೆಯ ತಮಿಳುನಾಡು, ಆಂಧ್ರಕ್ಕೆ ಹೋಲಿಸಿದರೆ ನಮ್ಮ ರೈತರಿಗೆ ಸರಕಾರ ಹೆಚ್ಚು ಸವಲತ್ತುಗಳನ್ನು ಕಲ್ಪಿಸುತ್ತಿದೆ. ಹಲವು ಯೋಜನೆಗಳನ್ನುಜಾರಿಗೊಳಿಸಿ, ತೋಟಗಾರಿಕೆ ಬೆಳೆಗಾರರ ಹಿತ ಕಾಪಾಡಲಾಗಿದೆ. ಯೋಜನೆಗಳ ಲಾಭ ಎಲ್ಲರಿಗೆತಲುಪಬೇಕೆಂಬುದು ಸರ್ಕಾರದ ಆಶಯವಾಗಿದೆ. ರೈತರನ್ನ ಪ್ರೋತ್ಸಾಹಿಸುವುದು ಅವರ ನೆರವಿಗೆ ನಿಲ್ಲುವುದು ಕರ್ತವ್ಯವೆಂದು ಬಾವಿಸಿ, ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಬೆಳೆ ಹಾನಿಗೀಡಾದ ರೈತರಿಗೆ ವಿಮೆ ಪಾವತಿ: ಕಳೆದ ವರ್ಷ ಜಿಲ್ಲೆಯಲ್ಲಿ ಹವಾಮಾನ ವೈಪರಿತ್ಯದಿಂದ ಬೆಳೆಹಾನಿಗೀಡಾದ ರೈತರಿಗೆ 2.23 ಕೋಟಿ ರೂ.ವಿಮೆಪಾವತಿಸಲಾಗಿದೆ. ಕೊರೊನಾದಿಂದ ಲಾಕ್‌ಡೈನ್ ಆದಾಗ13, 432 ಬೆಳೆಗಾರರಿಗೆ 6.53 ಕೋಟಿ ಪರಿಹಾರವಿತರಿಸಲಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 29 ಕೋಟಿ ಅನುದಾನ ಬಂದಿದ್ದು,13.80 ಕೋಟಿ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯತೋಟಗಾರಿಕೆ ಮಿಷನ್ ಅಡಿಯಲ್ಲಿ 1.70 ಕೋಟಿ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ರೈತರಿಗೆ ಸೌಲಭ್ಯ ನೀಡಲು ಪ್ರಯತ್ನಿಸಿ: ಶಾಸಕ ಕೆ. ಶ್ರೀನಿವಾಸಗೌಡ ಮಾತನಾಡಿ, ಕಳೆದ ಬಾರಿಸಮರ್ಪಕವಾಗಿ ಮಳೆ ಬಂದಿದ್ದು, ಇದರ ಜತೆಗೆ ಕೆಸಿವ್ಯಾಲಿ ನೀರು ಹರಿದು ಬರುತ್ತಿರುವುದರಿಂದ ಕೆರೆ,ಕುಂಟೆಗಳಲ್ಲಿ ಸಮೃದ್ಧವಾಗಿ ನೀರಿದ್ದು, ಎಲ್ಲ ರೈತರುಒಂದೇ ರೀತಿಯ ಬೆಳೆ ಇಡದೆ ಬೇರೆ ಬೇರೆ ಬೆಳೆಗಳನ್ನುಬೆಳೆಯಬೇಕು. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಸಿಗದೆನಷ್ಟ ಹೊಂದುವುದನ್ನು ತಪ್ಪಿಸಬಹುದು. ಸವಲತ್ತುಪಡೆಯದ ರೈತರಿಗೆ ಸವಲತ್ತು ದೊರಕಿಸಿಕೊಡಲುಅಧಿಕಾರಿಗಳು ಪ್ರಯತ್ನಿಸಬೇಕು. ಆರ್ಥಿಕವಾಗಿದುರ್ಬಲರಾದವರು ಯೋಜನೆಗಳನ್ನು ಸದುಪಯೋಗಮಾಡಿಕೊಂಡಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ರೈತ ಸಹ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಪಂ ಸಿಇಒ ಎಸ್.ಯು ಕೇಶ್ ಕುಮಾರ್, ಎಸ್‌ಪಿ ಡಿ.ದೇವರಾಜ್, ತೋಟಗಾರಿಕೆ ಉಪ ನಿರ್ದೇಶಕಿ ಎಂ.ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಎನ್.ನರೇಂದ್ರ,ಕಾರ್ಯಕ್ರಮ ಅಧಿಕಾರಿ ಬಿ.ಎಸ್. ಶಿವಪ್ರಕಾಶ್, ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷ ಎ.ವಿ.ವೆಂಕಟೇಶ್, ಕುಡಾಅಧ್ಯಕ್ಷ ವೆಂಕಟಾಚಲಪತಿ, ತೋಟಗಾರಿಕೆ ಮಹಾ ವಿದ್ಯಾಲಯ ಡೀನ್ ಡಾ.ಎಚ್.ಎಸ್ ಶಿವರಾಮ್ ಇದ್ದರು.