ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮೇ 27ರಂದು ಬೆಂಗಳೂರು ನಗರ ಗ್ರಾಹಕರಿಗಾಗಿ “ಮ್ಯಾಂಗೋ ಪಿಕ್ಕಿಂಗ್ ಟೂರ್’ ಆಯೋಜಿಸಿದೆ. ಮಾವು ಬೆಳೆಗಾರರಿಗೆ ತೋಟದಲ್ಲೇ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಮಾವು ಅಭಿವೃದ್ಧಿ ನಿಗಮ ಪ್ರತಿ ವರ್ಷ “ಮ್ಯಾಂಗೋ ಪಿಕ್ಕಿಂಗ್ ಟೂರ್’ ಆಯೋಜಿಸುತ್ತದೆ. ಗ್ರಾಹಕರು ತಮಗೆ ಇಷ್ಟವಾದ ಮಾವನ್ನು, ಮಾವು ಬೆಳೆಗಾರರ ತೋಟದಲ್ಲಿರುವ ಮರದಿಂದಲೇ ಕಿತ್ತು ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಮ್ಯಾಂಗೋ ಪಿಕ್ಕಿಂಗ್ ಟೂರ್‌ನಲ್ಲಿ 220 ಗ್ರಾಹಕರು ಪಾಲ್ಗೊಳ್ಳಲು ಅವಕಾಶ ವಿದ್ದು, ಮೊದಲು ಬಂದವರಿಗೆ ಆದ್ಯತೆ
ನೀಡಲಾಗುತ್ತದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಕಬ್ಬನ್ ಪಾರ್ಕ್‌ನಿಂದ ಗ್ರಾಹಕ ರನ್ನು ಹೊತ್ತು 4 ಬಸ್‌ಗಳು ರಾಮ
ನಗರದ ತೋಟಗಳಿಗೆ ಸಾಗಲಿವೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವೆಂಕಟರಾಯನದೊಡ್ಡಿ ಗ್ರಾಮದ ಮಂಜು ಅವರ ತೋಟಕ್ಕೆ
ಮತ್ತು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡಮಾಲೂರು ಗ್ರಾಮದ ಕೆ.ಮುನಿರಾಜು ಅವರ ತೋಟಕ್ಕೆ ಬೆಂಗಳೂರು ನಗರ ಗ್ರಾಹಕರನ್ನು ಕರೆದೊಯ್ಯಲಾಗುವುದು ಎಂದು ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ. ನಾಗರಾಜು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಮಾವು ಖರೀದಿ ಸುವಾಗ ರಾಸಾಯಿನಿಕ ದ್ರಾವಣ ಸಿಂಪಡಿಸುತ್ತಾರೆ ಎಂಬ ಭಯ ಗ್ರಾಹಕರಿಗೆ ಇರುತ್ತದೆ. ಅಲ್ಲದೆ, ರಾಸಾಯಿನಿಕ ದ್ರಾವಣ ಸಿಂಪಡಿಸಿದ ಮಾವಿನ ಹಣ್ಣುಗಳ ರುಚಿ ಕೂಡ ಕಡಿಮೆ. ಹೀಗಾಗಿ ಗ್ರಾಹಕರ ಹಿತದ ಜತೆಗೆ, ಮಾವು ಬೆಳೆಗಾರರಿಗೂ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕರಾದ ಎಲ್.ಲಲಿತಾ ಹೇಳಿದ್ದಾರೆ
ಅನ್‌ಲೈನ್‌ನಲ್ಲಿ ನೋಂದಣಿ “ಮ್ಯಾಂಗೋ ಪಿಕ್ಕಿಂಗ್ ಟೂರ್’ ಬೆಂಗಳೂರು ನಗರ ಗ್ರಾಹಕರಿಗೆ ಮಾತ್ರ. ಈಗಾಗಲೇ ಮಾವು ಅಭಿವೃದ್ಧಿ ನಿಗಮದ ವೆಬ್‌ಸೈಟ್ www.ksmdmcl.org. ನಲ್ಲಿ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಹಕರು Online/RTGS/NEFT ಮೂಲಕ ತಿಳಿಸಿರುವ ಖಾತೆಗೆ 100 ರೂ. ಪಾವತಿ ಸಬೇಕು. ಪಾವತಿ ವಿವರಗಳನ್ನು mangopickingtourism@gmail.com ಗೆ ಕಳುಹಿಸಿಕೊಡಲು ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳು ಕೋರಿದ್ದಾರೆ. ಆಸಕ್ತರು, ಹೆಚ್ಚಿನ ಮಾಹಿತಿಗಾಗಿ 800-22236837 ಸಂಪರ್ಕಿಸಬಹುದು.