Advertisement
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್ ಮಾತನಾಡಿ, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜಿಸಿರುವ ಈ ಮೇಳದಲ್ಲಿ ಮಾವಿನ ಹಣ್ಣಿನ 40 ಮಳಿಗೆಗಳು ಹಾಗೂ ಹಲಸಿನ ಹಣ್ಣಿನ 2 ಮಳಿಗೆಗಳನ್ನು ತೆರೆದು, ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದರು.
Related Articles
Advertisement
ಪರಿಸರ ಸ್ನೇಹಿ ಮೇಳ: ಮಾವು-ಹಲಸು ಮೇಳಕ್ಕೆ ಬರುವ ಮೈಸೂರಿನ ನಾಗರಿಕರು ಸ್ವ ಇಚ್ಛೆಯಿಂದ ಹಣ್ಣನ್ನು ಖರೀದಿಸಲು ಬಟ್ಟೆ ಬ್ಯಾಗ್‌ಗಳನ್ನು ತರಬೇಕೆಂದು ಕೋರಿದ ಅವರು, ರೈತರು ಕೂಡ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸಲು ಪೇಪರ್ ಕರ್ಟನ್ ಬಾಕ್ಸ್ ಹಾಗೂ ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕೆಂದು ಅವರು ಮನವಿ ಮಾಡಿದರು.
ರೈತರು ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸಲು ಪೇಪರ್ ಕರ್ಟನ್ ಬಾಕ್ಸ್‌ಗಳನ್ನು ಮಾವು ಅಭಿವೃದ್ಧಿ ಮಂಡಳಿಯ ನೋಂದಾಯಿತ, ಅಧಿಕೃತ ಸಂಸ್ಥೆಗಳು ಖರೀದಿಸಬಹುದು ಎಂದು ವೈಭವ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್ ಮೊ.9743704037 ಅಥವಾ ಎಂ.ಎಸ್.ಪ್ಯಾಕೇಜಿಂಗ್ ಇಂಡಸ್ಟ್ರೀಸ್, ಮೊ.9008081990 ಸಂಸ್ಥೆಗಳನ್ನು ಸೂಚಿಸಲಾಗಿದೆ.
ಇಲಾಖಾ ದರದಲ್ಲಿ ಮಾರಾಟ: ಮಾವು ಮೇಳಕ್ಕೆ ಮೈಸೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶ ದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಗ್ರಾಹಕರು ಭೇಟಿ ನೀಡುವುದರಿಂದ ಮೈಸೂರು ಜಿಲ್ಲೆಯ ಎಲ್ಲಾ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿರುವ ಹಣ್ಣು ಮತ್ತು ಅಲಂಕಾರಿಕ ಗಿಡಗಳನ್ನು ಇಲಾಖಾ ದರದಲ್ಲಿ ಮಾರಾಟ ಮಾಡಲು ಸಸ್ಯಸಂತೆಯನ್ನೂ ಆಯೋ ಜಿಸಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಹಬೀನಾ ನಿಶಾದ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.