Advertisement

ಮಾವು: ಉತ್ತಮ ಇಳುವರಿ ನಿರೀಕ್ಷೆ

07:06 AM Jan 26, 2019 | |

ದೇವನಹಳ್ಳಿ: ಗ್ರಾಮೀಣ ತಾಲೂಕಿನ ಪ್ರದೇಶದಲ್ಲಿ ಮಾವಿನ ಮರಗಳು ಚಿಗುರೆಲೆಗಳಿಂದ ಕಂಗೊಳಿಸುವ ಮೂಲಕ ನೋಡುಗರ ಕಣ್ಮನ ಸೆಳೆಯುತ್ತಿದ್ದು, ರೈತರು ಈ ಬಾರಿ ಹಣ್ಣುಗಳ ರಾಜ ಮಾವಿನ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

Advertisement

ಕಳೆದ ವರ್ಷವೂ ಮಾವಿನ ಮರಗಳಲ್ಲಿ ಹೂವಿನ ಪ್ರಮಾಣ ಅಧಿಕವಾಗಿತ್ತು. ಆದರೆ, ಜನವರಿಯಲ್ಲಿ ಅತಿಯಾದ ಇಬ್ಬನಿ, ಮೋಡ ಕವಿದ ವಾತಾವಣ ನಿರ್ಮಾಣ ವಾಗಿ ಬೂದಿ ರೋಗ ತಗುಲಿದ್ದರಿಂದ ರೈತರ ನಿರೀಕ್ಷೆ ಹುಸಿಯಾಗಿತ್ತು. ಪ್ರಸ್ತುತ ಮರಗಳಲ್ಲಿ ಭರಪೂರ ಹೂ ತುಂಬಿದ್ದರಿಂದ ರೈತರ ನಿರೀಕ್ಷೆ ಇಮ್ಮಡಿಗೊಂಡಿದೆ.

ತಾಪಮಾನದಿಂದ ತೊಂದರೆ: ಜಿಲ್ಲೆಯಲ್ಲಿ ಈಗಿರುವ ಚಳಿ ಪ್ರಮಾಣ ಮಾವಿನ ಮರ ಗಳಿಗೆ ಉತ್ತಮ ಫ‌ಸಲು ನೀಡಲು ಪೂರಕ ವಾದಂತೆ ಕಾಣುತ್ತಿದೆ. ಈ ಬಾರಿಯೂ ಮಂಜು ಹೆಚ್ಚು ಇದ್ದಿದ್ದರಿಂದ 25 ವರ್ಷ ಗಳಲ್ಲಿಯೇ ಚಳಿಗಾಲ ಹೆಚ್ಚಾಗಿ ಕಂಡು ಬಂದಿತ್ತು. ಕಳೆದ ವರ್ಷದಲ್ಲಿ ಬಿಸಿಲಿನ ತಾಪ ಮಾನ ಹೆಚ್ಚಾಗಿದ್ದ ಕಾರಣ ಮಾವಿನ ಬೆಳೆ ಕೈ ಕೊಟ್ಟಿತ್ತು. ಹಾಗಾಗಿ, ಸಾಕಷ್ಟು ನಷ್ಟ ಅನು ಭವಿಸಿದ್ದ ರೈತರು ಈ ಬಾರಿಯಾ ದರೂ ಉತ್ತಮ ಮಳೆಯಾದರೆ ಫ‌ಸಲು ಉತ್ತಮವಾಗಿ ಬರಬಹುದೆಂಬ ನಿರೀಕ್ಷೆಯ ಲ್ಲಿದ್ದರು. ಆದರೆ, ಸಕಾಲದಲ್ಲಿ ಮಳೆಯಾಗ ದ ಕಾರಣ ರೈತರು ಕಂಗಾಲಾಗಿದ್ದರು.

ಈ ಬಾರಿ ಯಾವುದೇ ತೊಂದರೆಯಿಲ್ಲ: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ, ಕಸಬಾ ಹೋಬಳಿ, ಕುಂದಾಣ ಹೋಬಳಿ, ವಿಜಯಪುರ ಹೋಬಳಿ ಸೇರಿ ದಂತೆ ಸುತ್ತಮುತ್ತಲಿನಲ್ಲಿ ಮಾವು ಬೆಳೆ ಗಾರರಿದ್ದಾರೆ. ಕಳೆದ ವಾರ ಕೆಲವು ದಿನ ಗಳಲ್ಲಿ ಇಬ್ಬನಿ ಬೀಳುವುದು, ಮೋಡ ಕವಿದ ವಾತಾವರಣ ಕಂಡುಬಂದರೂ ಮಾವಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನಲಾಗುತ್ತಿದೆ.

ತೋಟಗಾರಿಕೆ ಇಲಾಖೆ ಮಾಹಿತಿ: ಈ ಬಾರಿ ದೇವನಹಳ್ಳಿ ತಾಲೂಕಿನ 280 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯ ಲಾಗುತ್ತಿದೆ. ಪ್ರಸ್ತುತ ಹವಾಮಾನ ವೈಪ ರೀತ್ಯದಿಂದಾಗಿ ಮೂರು ಹಂತಗಳಲ್ಲಿ ಮಾವು ಬೆಳೆಯು ತ್ತಿದ್ದಾರೆ. ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಯಲ್ಲಿದ್ದ ನೀರು ಬತ್ತಿ ಹೋಗಿ ದ್ದು, ರೈತರನ್ನು ಚಿಂತೆಗೀಡು ಮಾಡಿದೆ.

Advertisement

ಮರಗಳಲ್ಲಿ ಹೂವು, ರೈತರ ಹರ್ಷ: ತಾಲೂ ಕಿನಲ್ಲಿ ಸತತ ಬರಗಾಲ ಆವರಿಸಿ ವರ್ಷದಿಂದ ವರ್ಷಕ್ಕೆ ಮಾವಿನ ಫ‌ಸಲು ಕುಂಠಿತವಾಗುತ್ತಿದೆ. ತೇವಾಂಶದ ಕೊರತೆ ಯಿಂದಾಗಿ ಮರಗಳು ಒಣಗುತ್ತಿವೆ. ಇದ ರಿಂದ ಗುಣಮಟ್ಟದ ಮಾವು ಬೆಳೆಯಲು ಕಷ್ಟಕರವಾಗಿದೆ. ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಜನವರಿ ತಿಂಗಳೊಳಗೆ ಮಾವಿನ ಮರಗಳಲ್ಲಿ ಹೂವು ಹೆಚ್ಚಾಗಿ ಮೂಡಿವೆ. ಇದು ರೈತರ ಮೊಗದಲ್ಲಿ ಸಂತಸದ ವಾತಾವರಣಕ್ಕೂ ಕಾರಣವಾಗಿದೆ.

ಮಧ್ಯಮ ಪ್ರಮಾಣದಲ್ಲಿ ಮಾವು ಬೆಳೆ ಯುತ್ತಿರುವ ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಬೆಂಗಳೂರು ಮಹಾನಗರಕ್ಕೆ ಹೋಗಬೇಕು. ಮಾರು ಕಟ್ಟೆಗೆ ಹೋಗಲು ರೈತರಿಗೆ ಆರ್ಥಿಕ ಸಮಸ್ಯೆಯಿದೆ. ಜೊತೆಗೆ ತಾಲೂಕಿನಲ್ಲಿ ಮಾವು ಸಂರಕ್ಷಣಾ ಘಟಕವಿಲ್ಲ್ಲ. ರೈತರು ತಮ್ಮ ಮರಗಳನ್ನೇ ಬೇರೆ ಜಿಲ್ಲೆಯ ವ್ಯಾಪಾ ರಿಗಳಿಗೆ ಮುಂಗಡ ಹಣ ಪಡೆದು ಗುತ್ತಿಗೆ ನೀಡುತ್ತಿರುವುದು ಕಂಡುಬರುತ್ತಿದೆ. ಇದ ರಿಂದ ರೈತರು ಲಾಭವಿಲ್ಲದೇ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ತಲೆ ಕೆಡಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next