ಮೈಸೂರು: ಆಕರ್ಷಕ ರೂಪ, ಸ್ವಾದಿಷ್ಟ ರುಚಿ ಹಾಗೂ ಮನಮೋಹಕ ಪರಿಮಳದ ಗುಣಗಳಿಂದಾಗಿ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ, ಕಾರ್ಬೈಡ್ ಉಪಚರಿಸಿ ಮಾಗಿಸಿದ ಹಣ್ಣಿನದೇ ದರ್ಬಾರಾಗಿರುವುದರಿಂದ ಗ್ರಾಹಕರು ಖರೀದಿಸಲು ಹಿಂದು ಮುಂದು ನೋಡುವಂತಾಗಿದೆ.
ಮಾವಿನ ಕಾಯಿಯನ್ನು ಬೇಗನೆ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಉಪಚರಿಸಿ ಮಾಗಿಸಿದ ಮಾವಿನ ಹಣ್ಣು ಸೇವಿಸುವುದರಿಂದ ಕ್ಯಾನ್ಸರ್ ಕಾಯಿಲೆ ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿ ಣಾಮ ಉಂಟಾಗಲಿದೆ. ಹೀಗಾಗಿ ಇಂತಹ ಹಣ್ಣು ಗಳನ್ನು ತಿನ್ನದೇ ಇರುವುದು ಒಳಿತು ಎಂದು ತೋಟ ಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಕಾರ್ಬೈಡ್ ಉಪಚರಿಸಿದ ಮಾವಿನ ಹಣ್ಣಿನ ಸಿಪ್ಪೆ ಸಂಪೂರ್ಣವಾಗಿ ಹಳದಿ ಬಣ್ಣದಿಂದ ಕೂಡಿರು ವುದಲ್ಲದೆ, ಹಣ್ಣಿನ ಮೇಲೆ ಅಲ್ಲಲ್ಲಿ ಕಾರ್ಬೈಡ್‌ನ ಧೂಳು ಅಂಟಿರುತ್ತದೆ. ಜತೆಗೆ ಕೆಲವು ಮಾವಿನ ತಳಿಗಳಲ್ಲಿ ಹಳದಿ ಹಾಗೂ ಹಸಿರು ಬಣ್ಣದ ಮಚ್ಚೆಯೂ ಇರುತ್ತದೆ. ಹಣ್ಣಿನ ಸಿಪ್ಪೆ ಮಂದವಾಗಿದ್ದು ತಿರುಳಿನಿಂದ ಬೇರ್ಪಡಿಸುವುದು ಕಷ್ಟವಾಗುತ್ತದೆ. ಹಣ್ಣು ತಿಳಿ ಹಳದಿ ಬಣ್ಣದಿಂದ ಕೂಡಿದ್ದು, ತಿರುಳು ಗಟ್ಟಿಯಾಗಿರುತ್ತದೆ. ಅಲ್ಲದೇ ನಾರಿನ ಅಂಶ ಕೂಡ ಇರುವುದಿಲ್ಲ.
ಈ ಹಣ್ಣನ್ನು ತಿಂದಾಗ ಹುಳಿ ಮಿಶ್ರಿತ ಸಿಹಿ ಹಾಗೂ ನಾಲಗೆಗೆ ಆಮ್ಲಿàಯ ಅನುಭವವಾಗುತ್ತದೆ. ಇಂತಹ ಕಾರ್ಬೈಡ್ ಯುಕ್ತ ಹಣ್ಣನ್ನು 4-5 ದಿನಗಳ ಕಾಲ ಕೆಡದಂತೆ ಇಡಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು. ಕರ್ನಾಟಕದಲ್ಲಿ ಪ್ರಮುಖವಾಗಿ ಮೈಸೂರು, ಕೋಲಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ಮೊದಲಾದ ಜಿಲ್ಲೆಗಳ ಸುಮಾರು 1.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ.
ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೆಂದೂರಾ, ಮಲಗೋಬಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್, ದಶೇರಿ ಮೊದಲಾದ ತಳಿಯ ಮಾವನ್ನು ರಾಜ್ಯದಲ್ಲಿ ಬೆಳೆಯಲಾಗುತ್ತದೆ. ಮೈಸೂರು ಜಿಲ್ಲೆಯ ಸುಮಾರು 4128 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ರತ್ನರಿ ಅಲ್ಪಾ ನ್ಸೋ, ಬಾದಾಮಿ, ರಸಪುರಿ, ಸೇಂಧೂರ, ಮಲಗೋಬಾ, ತೋತಾಪುರಿ, ಮಲ್ಲಿಕಾ, ದಶೇರಿ ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದ್ದು, ವಾರ್ಷಿಕ 40 ಟನ್ ಮಾವು ಬೆಳೆ ಅಂದಾಜಿಸಲಾಗಿದೆ.
* ಗಿರೀಶ್ ಹುಣಸೂರು