Advertisement
ತಾಜಾ ಮಾಲ್ಈ ಮ್ಯಾಂಗೋ ಹಬ್ಬದಲ್ಲಿ ಫೆಸ್ಟ್. ಸಿಂಧೂರ, ಕೇಸರ್, ರಸಪುರಿ, ಬಾಗೇಪಲ್ಲಿ, ಮಲ್ಲಿಕಾ, ತೋತಾಪುರಿ, ಆಮ್ರಪಲ್ಲಿ ಹೀಗೆ ಬಹುತೇಕ ಎಲ್ಲ ತಳಿಯ ತಾಜಾ ಮಾವಿನಹಣ್ಣುಗಳು ಇಲ್ಲಿ ಲಭ್ಯವಿದ್ದು, ಬೆಲೆ ಕೆ.ಜಿ.ಗೆ 30 ರೂ. ಇಂದ ಪ್ರಾರಂಭವಾಗಲಿದೆ. ಅಷ್ಟೇ ಅಲ್ಲದೆ, ತಾಜಾ ಮಾವಿನ ಹಣ್ಣಿನ ರಸ, ಉಪ್ಪಿನಕಾಯಿ ಮುಂತಾದ ಮಾವಿನ ಖಾದ್ಯಗಳನ್ನೂ ಸವಿಯಬಹುದು. ಇವೆಲ್ಲವಕ್ಕೂ ರಿಯಾಯಿತಿ ದರವನ್ನು ನಿಗದಿ ಪಡಿಸಲಾಗಿದೆ.
ಮಾವು ಪ್ರಿಯರಿಗೆ ಮಾವು. ತಿಂಡಿಪೋತರಿಗೆ, ಸವಿಯಲು ಮಾವಿನಹಣ್ಣಿನಿಂದ ತಯಾರಾದ ಖಾದ್ಯಗಳು. ಒಟ್ಟಿನಲ್ಲಿ ಕುಟುಂಬ ಸಮೇತ ಹೋದವರಿಗೆ ಔಟಿಂಗ್‌ನ ಅನುಭವ ಸಿಕ್ಕರೆ ಅಚ್ಚರಿಯೇನಿಲ್ಲ. ಬರೀ ದೊಡ್ಡವರು ಮಾವಿನ ಶಾಪಿಂಗ್‌ನಲ್ಲಿ ಖುಷಿಪಡುತ್ತಿರುವಾಗ ಮಕ್ಕಳೇನು ಮಾಡುವುದು ಎಂಬ ಚಿಂತೆಗೆ ಇಲ್ಲಿ ಕಾರಣವಿಲ್ಲ. ಎಕೆಂದರೆ ಮಕ್ಕಳಿಗಾಗಿಯೇ ಕೆಲ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಪಾಲ್ಗೊಂಡು ಇಲ್ಲಿ ಮೋಜು- ಮಸ್ತಿ ಮಾಡಲು ಅವಕಾಶವಿದೆ. 6-12 ವಯಸ್ಸಿನ ಮಕ್ಕಳಿಗಾಗಿ ಆರ್ಟ್ಸ್ ಅಂಡ್ ಕ್ರಾಫ್ಟ್$Õ ವರ್ಕ್‌ಶಾಪ್ ಅನ್ನು ಆಯೋಜಿಸಲಾಗಿದ್ದು, ವಿವಿಧ ಚಟುವಟಿಕೆಗಳನ್ನು ಅಲ್ಲಿ ಅವರಿಗೆ ಕಲಿಸಲಾಗುತ್ತದೆ. ಪ್ರತಿದಿನ ಸಂಜೆ 4-8ರವರೆಗೆ ಮಕ್ಕಳಿಗೆ ಕಾರ್ಯಾಗಾರಗಳು ನಡೆಯುತ್ತದೆ. ಏನೇನು ಚಟುವಟಿಕೆಗಳಿವೆ?
ಮಕ್ಕಳಿಗೆ ಪೇಪರ್ ಫ್ರಾಕ್, ಒರಿಗಾಮಿ ಕ್ರಾಫ್ಟ್, ಪೇಪರ್ ಲ್ಯಾಂಪ್, ಐಸ್‌ಕ್ರೀಮ್ ಸ್ಟಿಕ್ ಕ್ರಾಫ್ಟ್, ಕ್ವಿಲ್ಲಿಂಗ್, ಪೇಪರ್ ಬ್ಯಾಗ್ ತಯಾರಿ, ಮಂಡಲ ಆರ್ಟ್, ಚಿತ್ರಕಲೆ, ಪ್ಲಾಸ್ಟಿಕ್ ಮ್ಯಾಟ್ ತಯಾರಿ ಮುಂತಾದ ಚಟುವಟಿಕೆಗಳನ್ನು ಹೇಳಿ ಕೊಡಲಾಗುತ್ತದೆ.
Related Articles
ಯಾವಾಗ?: ಮೇ 20, ಬೆಳಗ್ಗೆ 11- ರಾತ್ರಿ 8
ಮಕ್ಕಳ ವರ್ಕ್‌ಶಾಪ್ : ಸಂಜೆ 4- ರಾತ್ರಿ 8
ಪ್ರವೇಶ: 250 ರೂ.
Advertisement
ಲಾಲ್‌ಬಾಗ್ ಮಾವು ಮೇಳಹೂವಿನೊಡನೆ ಹಣ್ಣು ಅಂಗಡಿ ಮಳಿಗೆಗಳಲ್ಲಿ ಮಾವು ಕೊಳ್ಳುವ ಮಜ ಒಂದು ರೀತಿಯದ್ದಾದರೆ, ಸಾವಿರಾರು ಒಟ್ಟು ಸೇರುವ ಮೇಳಗಳಲ್ಲಿ ಮಾವು ಕೊಳ್ಳುವುದು ಬೇರೆಯದೇ ರೀತಿಯ ಖುಷಿಯನ್ನು ಕೊಡುತ್ತದೆ. ಲಾಲ್‌ಬಾಗ್ ಮಾವು ಮೇಳ ತಿಂಗಳಾಂತ್ಯದಲ್ಲಿ ಶುರುವಾಗುತ್ತಿದೆ. ಕೈಚೀಲಗಳನ್ನು ಕೊಂಡೊಯ್ದು ಕುಟುಂಬ ಸಮೇತ ಲಾಲ್‌ಬಾಗಿನ ಮಾವಿನಹಣ್ಣಿನ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಸಿಗುವ ತಾಜಾ ಮಾವು ಕೊಳ್ಳುವುದೆಂದರೆ ಯಾರಿಗೆ ತಾನೇ ಇಷ್ಟವಾಗದು. ಲಾಲ್‌ಬಾಗಿನ ಗಿಡಮರಗಳು, ಹೂಗಳ ಸೌಂದರ್ಯವನ್ನು ಸವಿಯುವುದರ ಜೊತೆಗೆ ಹಣ್ಣಿನ ರುಚಿಯನ್ನೂ ಸವಿಯಬಹುದು.
ಎಲ್ಲಿ?: ಲಾಲ್‌ಬಾಗ್
ಯಾವಾಗ?: ಮೇ 30ರಿಂದ ಶುರು