Advertisement

ಮಾವು ಬೆಳೆಗಾರರು ಬೇಸಿಗೆ ಬೇಸಾಯ ಕ್ರಮ ಅನುಸರಿಸಲಿ

11:16 AM May 11, 2019 | keerthan |

ಕೋಲಾರ: ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಗಾರರಿದ್ದು, ಕಾಲಕ್ಕೆ ತಕ್ಕಂತೆ ಮಾವು ಬೆಳೆ ನಿರ್ವಹಣೆ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ರೋಗ ಮತ್ತು ಕೀಟಗಳ ಬಾಧೆ, ಇಳುವರಿಯಲ್ಲಿ ಕುಂಠಿತ ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈತ ಫಲಾನುಭವಿಗಳು ರಕ್ಷಣಾ ಕ್ರಮ ಕೈಗೊಳ್ಳಬೇಕಾಗಿದೆ.

Advertisement

ಬೇಸಿಗೆಯಲ್ಲಿ ಎರಡು ಬಾರಿ ನೇಗಿಲಿನಿಂದ ಆಳವಾಗಿ ಉಳುಮೆ ಮಾಡುವುದು, ಭೂಮಿಯನ್ನು ಸಮತಟ್ಟು ಮಾಡುವುದು. ಹೆಚ್ಚಿನ ಸಾಂಧ್ರತೆಯುಳ್ಳ ನೆಡುತೋಪುಗಳಿಗಾಗಿ ಸಾಲುಗಳು, ಸಸ್ಯಗಳನ್ನು 5 ಮೀಟರ್‌ ಅಂತರದಲ್ಲಿ ನೆಡಲು, ಅಗೆಯುವ ಗುಂಡಿಗಳ ಹೊಂದಾಣಿಕೆ ಮಾಡುವುದು ಮತ್ತು ಗೂಟದಿಂದ ಗುರುತು ಮಾಡುವುದು ಹಾಗೂ ಸಾಮಾನ್ಯ ನೆಡುತೋಪುಗಳಿಗೆ 9 ಮೀ. ಅಂತರ ನೀಡಬೇಕು. ಗುಂಡಿಯ ಗಾತ್ರ, ಅಳತೆ 90X-90X90 ಸೆಂ.ಮೀ.ಇರಬೇಕು.

ಗುಂಡಿ ಅಗೆಯುವಾಗ ಮುನ್ನೆಚ್ಚರಿಕೆ ಕ್ರಮ: ಅಗೆದ (1 ಅಡಿ) ಮೇಲ್ಭಾಗದ ಮೇಲ್ಪದರದ ಮಣ್ಣನ್ನು ಎಡಭಾಗದಲ್ಲಿ ಇರಿಸಬೇಕು. ಅಗೆದ ಗುಂಡಿಯನ್ನು ತುಂಬುವ ಮೊದಲು ಮಣ್ಣಿನಿಂದ ಬರುವ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಲು ಸೂಯನ ಕಿರಣಗಳಿಗೆ ಗುಂಡಿಗಳನ್ನು 2 ವಾರಗಳವರೆಗೆ ತೆರೆದಿಡಬೇಕು.

ಸರ್ಕಾರದ ವಿಶ್ವಾಸಾರ್ಹ ನರ್ಸರಿಗಳಿಂದ, ತೋಟಗಾರಿಕೆ ಇಲಾಖೆ ಶಿಫಾರಸ್ಸು ಮಾಡಿದ ನರ್ಸರಿಗಳಿಂದ ಸಸಿ ಪಡೆಯಲು ವ್ಯವಸ್ಥೆ ಮಾಡಿಕೊಳ್ಳಬೇಕು. ಹಣ್ಣು ಬಿಡುವ ಮರಗಳಿಂದ ಮಾವಿನ ಹಣ್ಣುಗಳನ್ನು ಸರಿಯಾಗಿ ಪಕ್ವವಾದ ನಂತರ ಸುಧಾರಿತ ಕ್ರಮಗಳನ್ನು ಅನುಸರಿಸುವುದರೊಂದಿಗೆ ಕಟಾವು ಮಾಡಬೇಕಿದೆ.

ಕೊಯ್ಲೋತ್ತರ ಕ್ರಮ ಕಡ್ಡಾಯ: ಹಳೆಯ ತೋಟಗಳಲ್ಲಿ ಕಾಂಡಕೊರಕ ಹುಳುವಿನ ಬಾಧೆ ಇದ್ದಲ್ಲಿ, ಹೀಲರ್‌ ಕಮ್‌ ಸೀಲರ್‌ ಚಿಕಿತ್ಸೆಯನ್ನು ನೀಡಬೇಕು. ಪ್ಯಾಕ್‌ಹೌಸ್‌ ಹೊಂದಿರುವ ರೈತರು ಕೊಯ್ಲು ಮುಂಚಿನ ಹಾಗೂ ಕೊಯ್ಲೋತ್ತರ ಕ್ರಮ ಕಡ್ಡಾಯವಾಗಿ ಪಾಲಿಸಬೇಕು.

Advertisement

ಹಣ್ಣುಗಳನ್ನು ಮಾಗಿಸಲು ಐಐಎಚ್ಆರ್‌, ಬೆಂಗಳೂರು ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಮಾವು ಮಾಗಿಸುವ ಘಟಕಗಳನ್ನು ಉಪಯೋಗಿಸಿಕೊಳ್ಳುವುದು, ಹಣ್ಣು ನೊಣ ಮತ್ತು ಚಿಬ್ಬು ರೋಗದ ಹಾನಿಯನ್ನು ತಡೆಗಟ್ಟುವ ಸಲುವಾಗಿ ಐಐಎಚ್ಆರ್‌, ಬೆಂಗಳೂರಿಂದ ಶಿಫಾರಸ್ಸು ಮಾಡಿದಂತೆ ಕೊಯ್ಲು ಮಾಡಲಾದ ಹಣ್ಣುಗಳನ್ನು ಬಿಸಿ ನೀರಿನಲ್ಲಿ ಉಪಚರಿಸಬೇಕು.

ಕೊಯ್ಲು ಮಾಡಲಾದ ಹಣ್ಣುಗಳನ್ನು ವಿಂಗಡಣೆ ಮತ್ತು ಪ್ಯಾಕಿಂಗ್‌ ಮಾಡಿ ಮಾರುಕಟ್ಟೆಗೆ ಕಳುಹಿಸುವುದು. ದೂರದ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಪ್ಯಾಕಿಂಗ್‌ ಸಾಮಗ್ರಿಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ಪ್ಯಾಕಿಂಗ್‌ಗಳಲ್ಲಿ ಕಳುಹಿಸಿಕೊಡುವುದು, ಮಾವಿನ ಹಣ್ಣಿನ ಹಣ್ಣು ನೊಣದ ಮೋಹಕ ಬಲೆಯಲ್ಲಿ ಮೋಹಕ ಧಾತುವನ್ನು ಬದಲಿಸುವುದು, ಬಿದ್ದ ಹಣ್ಣುಗಳನ್ನು ಸಂಗ್ರಹಿಸುವುದು ಹಾಗೂ ನಾಶಪಡಿಸುವುದು, ಮಾವಿನ ಹಣ್ಣಿನ ಹಣ್ಣು ನೊಣದ ಆಕರ್ಷಣೆಗೆ ಬೇಟ್ ಪದಾರ್ಥವನ್ನು ಸಿಂಪಡಿಸುವುದು ಮಾಡಬೇಕು.

ಮಾಹಿತಿಗೆ ದೂ. 7829512236, ತೋಟಗಾರಿಕೆ ಸಲಹಾ ಮತ್ತು ಮಾಹಿತಿ ಕೇಂದ್ರ ಸಂಪರ್ಕಿಸಿ.

Advertisement

Udayavani is now on Telegram. Click here to join our channel and stay updated with the latest news.

Next