Advertisement
ದೇವನಹಳ್ಳಿ-ಚಿಕ್ಕಬಳ್ಳಾಪುರ ರಸ್ತೆಯ ರಾಣಿ ಕ್ರಾಸ್ ಅಥವಾ ಸಾದಹಳ್ಳಿ ಬಳಿಯಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟೋಲ್ ಬಳಿ ಮಾವು ಮೇಳ ಆಯೋಜಿಸಲು ಅಧಿಕಾರಿಗಳು ನಿರ್ಧರಿಸುತ್ತಿದ್ದಾರೆ. ಬೆಂಗಳೂರಿನ ಲಾಲ್‌ಬಾಗ್ ನಲ್ಲಿ ಮೇ.30ರಿಂದ ಮಾವು ಹಾಗೂ ಹಲಸು ಮೇಳ ನಡೆಯುತ್ತಿರುವುದರಿಂದ ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿಯೂ ಸಹ ನಡೆಸಲು ನಿರ್ಧರಿಸುತ್ತಿದ್ದಾರೆ.
Related Articles
Advertisement
ನೋಂದಣಿಗೆ ಅವಕಾಶ: ಮಲ್ಲಿಕಾ, ಬಾದಾಮಿ, ರಸಪೂರಿ, ಸೇಂದೂರ, ತೋತಾಪುರಿ ಸೇರಿದಂತೆ ನಾನಾ ವೈವಿದ್ಯಮಯ ಹಣ್ಣುಗಳು ಒಂದೇ ಕಡೆ ಮೇಳೈಸಲಿದೆ. ಮೇಳದಲ್ಲಿ ಮಾವು ಮಾರಾಟ ಮಾಡಲು ಇಚ್ಚಿಸುವ ರೈತರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು 080-29787453 ಹಾಗೂ ಹೆಸರನ್ನು ನೋಂದಣಿ ಮಾಡಿಕೊಂಡು ಬೆಳೆಗಾರರು ಹಾಗೂ ಗ್ರಾಹಕರು ಮೇಳದ ಪ್ರಯೋಜನ ಪಡೆಯಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು 4 ಹೆಕ್ಟೇರ್ ನಷ್ಟು ಮಾವು ಬೆಳೆದಿದ್ದು ಆಸಕ್ತ ಬೆಳೆಗಾಗರರು ಮೇಳದಲ್ಲಿ ಭಾಗವಹಿಸಿ ಮಾರಾಟ ಮಾಡಲು ತೋಟಗಾರಿಕೆ ಇಲಾಖೆಗೆ ಹೆಸರನ್ನು ನೋಂದಾಯಿಸುವಂತೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಾವು ಮೇಳ ಹಮ್ಮಿಕೊಳ್ಳಲಾಗುವುದು. ಬೆಳೆಗಾಗರರಿಗೆ ಇದರಿಂದ ಅನುಕೂಲವಾಗಲಿದೆ ಅದಕ್ಕಾಗಿ ಸಕಲ ಸಿದ್ಧತೆ ನಡೆಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೇವನಹಳ್ಳಿ ಸಮೀಪದ ಸಾದಹಳ್ಳಿ ಹತ್ತಿರವಿರುವ ಟೋಲ್ ಬಳಿ ಮಾವು ಮೇಳಕ್ಕೆ ಜಾಗ ಗುರುತಿಸುವ ಕೆಲಸ ಪ್ರಗತಿಯಲ್ಲಿದೆ.-ಕರೀಗೌಡ, ಜಿಲ್ಲಾಧಿಕಾರಿ ಮಾವು ಮೇಳ ಮಾಡಲು ಸೂಕ್ತ ಜಾಗವನ್ನು ಹುಟುಕಾಟ ನಡೆಸಲಾಗುತ್ತಿದೆ. ಆಸಕ್ತ ರೈತರು ಹೆಸರು ನೋಂದಾಯಿಸಬಹುದು. ಜಿಲ್ಲೆ ಮಾತ್ರವಲ್ಲದೇ ನೆರೆಯ ಜಿಲ್ಲೆಯ ಬೆಳೆಗಾರರೂ ಮೇಳದಲ್ಲಿ ಭಾಗವಹಿಸಬಹುದು.
-ರುದ್ರೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ * ಎಸ್ ಮಹೇಶ್