Advertisement
ಮಾವಿನ ಹಣ್ಣು ಮಾರುಕಟ್ಟೆಗೆ ಒಮ್ಮೆಗೆ ಲಗ್ಗೆ ಇಟ್ಟರೆ ವ್ಯಾಪಾರ ಕುಂಠಿತಗೊಳ್ಳುತ್ತದೆ. ಅಂತಹ ಮಾವಿನ ಫಸಲು ಈ ಬಾರಿ ಒಂದೂವರೆ ತಿಂಗಳು ವಿಳಂಬವಾಗಿ ಮಾರುಕಟ್ಟೆಗೆ ಪ್ರವೇಶಿಸಬಹುದು ಎಂಬುದು ಅಧಿಕಾರಿಗಳ ಮಾತು.
Related Articles
Advertisement
ಜೋನಿ ರೋಗದ ಆತಂಕ: ಆದರೆ ಹೂ ಬಿಡುವಾಗ ಉಷ್ಣಾಂಶ ಹೆಚ್ಚಾದರೂ ಮಾವಿಗೆ ಕಂಟಕವೇ ಜೋನಿ ರೋಗ ಕಾಡುವ ಆತಂಕ ಎದುರಾಗಲಿದೆ. ಈಗಾಗಲೇ ಚಳಿಗಾಲ ಮುಗಿಯುತ್ತ ಬಂದಿದೆ ಉಷ್ಣಾಂಶ ಹೆಚ್ಚಾದರೆ ಜೋನಿ ರೋಗ ಜಿಗಿಹುಳ ರೋಗಬಾಧೆ ಹೆಚ್ಚಾಗಿಹೂವಿನ ಮೇಲೆ ದಾಳಿ ಮಾಡಲಿದೆ. ಮಾರ್ಚ್ ತಿಂಗಳಲ್ಲಿ ಇದರ ಬಾಧೆ ಹೆಚ್ಚು. ಈಗಾಗಲೇ ಮಾವು ಕೃಷಿ ರೈತರು ಔಷಧಿ ಸಿಂಪಡನೆಗೆ ಮುಂದಾಗಿದ್ದಾರೆ. ಈ ಬಾರಿ ಹೆಚ್ಚಿನ ಇಳುವರಿ ಬರುವ ನಿರೀಕ್ಷೆ ಇದ್ದುದರ ಕುಸಿತ ಕಾಣಬಹುದು ಎಂದು ಹೇಳಲಾಗುತ್ತಿದೆ
ಸಾತನೂರಿನಲ್ಲಿ ಹೆಚ್ಚು ಮಾವು: ಜಿಲ್ಲೆಯಲ್ಲಿ 33 ಸಾವಿರ ಹೆಕ್ಟೇರ್ ತಾಲೂಕಿನಲ್ಲಿ ನಾಲ್ಕೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದೆ. ಕಸಬಾ ಮತ್ತು ಸಾತನೂರು ಭಾಗದಲ್ಲಿ ಅತಿ ಹೆಚ್ಚು ಮಾವುಬೆಳೆಯುವ ರೈತರಿದ್ದಾರೆ. ನೇರ ಮಾರುಕಟ್ಟೆ ವ್ಯವಸ್ಥೆಗೆ ರೈತರನ್ನು ತರಲುಇಲಾಖೆ ಮಾವಿನ ಮೇಳ ಹಮ್ಮಿಕೊಳ್ಳಲಿದೆ. ಇದು ರೈತರಿಗೆ ಹೆಚ್ಚುಲಾಭ ತರಲಿದೆ. ಕೆಲವು ರೈತರು ಮಾವಿನ ಕಾಯಿಯನ್ನು ಹಣ್ಣು ಮಾಡುವ ತರಬೇತಿ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಇಲಾಖೆ ಅಧಿಕಾರಿಗಳು ಮಾರ್ಚ್ ತಿಂಗಳಒಳಗಾಗಿ ತರಬೇತಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮಾವಿನ ತಳಿ ಎಷ್ಟು ದಿನಕ್ಕೆ ಬೆಳೆ? ಶೇ.25 ರಷ್ಟು ಕಾಯಿ ಕಟ್ಟಿದೆ ಶೇ.75 ರಷ್ಟು ಈಗಷ್ಟೆ ಹೂ ಬಿಟ್ಟಿದೆ. ಪ್ರತಿವರ್ಷ ಏಪ್ರಿಲ್ ನಲ್ಲಿ ಕಟಾವು ಆರಂಭವಾಗುತ್ತಿತ್ತು. ಆದರೆ ಈ ಬಾರಿ ಮೇ, ಜೂನ್‌ಗೆ ಕಟಾವಿಗೆಬರಲಿದೆ. ನಮ್ಮ ಜಿಲ್ಲೆಯಲ್ಲಿ ಸೇಂದೂರ 70 ದಿನಗಳಿಗೆಕಟಾವಾಗುತ್ತಿತ್ತು. ಆದರೆ ಈ ಬಾರಿ ನಿರೀಕ್ಷೆಯಂತೆ ಹೂ ಬಿಟ್ಟಿಲ್ಲ.ಶೇ.50ರಷ್ಟು ಇಳುವರಿ ಕುಂಟಿಠವಾಗಿದೆ. ಬಾದಾಮಿ 120ದಿನ,ರಸಪೂರಿ 90ದಿನಗಳಲ್ಲಿ ಕಟಾವಾಗಲಿದೆ. ಈ ಬಾರಿ ಸ್ವಲ್ಪ ವಿಳಂಬವಾಗಲಿದೆ.
ಬಾದಾಮಿ ಬೆಳೆಯ ಕೇಂದ್ರ: ಮಾವಿನಲ್ಲಿ ಹಲವಾರು ವಿಧಗಳಿವೆ. ರಾಮನಗರ ಜಿಲ್ಲೆಯಲ್ಲಿ ಶೇ.80ರಷ್ಟು ಬಾದಾಮಿ ಬೆಳೆಯುವ ರೈತರಿದ್ದಾರೆ. ಉಳಿದ ಶೇ.20ರಷ್ಟು ರಸಪೂರಿ ನೀಲಂ ಸೇಂದೂರ,ತೋತಾಪುರಿ ಬೆಳೆಯಿದೆ ಆದರೆ ಅತಿ ಹೆಚ್ಚು ಬೇಡಿಕೆ ಮತ್ತು ಆದಾಯಬರುವುದು ಬಾದಾಮಿ ತಳಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಮಾವಿಗೆ ನೆರೆಯ ರಾಜ್ಯಗಳಲ್ಲಿ ಬೇಡಿಕೆ ಇದೆ. ನಮ್ಮ ಜಿಲ್ಲೆಯಲ್ಲಿಬೆಳೆಯುವ ಬಾದಾಮಿಗೆ ಮಹಾರಾಷ್ಟ್ರ ,ಡೆಲ್ಲಿ, ಹೈದರಾಬಾದ್, ಕೇರಳರಾಜ್ಯಗಳಲ್ಲೂ ಮಾರುಕಟ್ಟೆ ಇದೆ. ರೇಷ್ಮೆ ನಗರಿ ಎಂದುಖ್ಯಾತಿಪಡೆದಿರುವ ರಾಮನಗರ ಜಿಲ್ಲೆ ಮಾವು ಕೃಷಿಯಲ್ಲೂ ಮುಂದಿರುವುದು ಜಿಲ್ಲೆಗೆ ಮತ್ತೂಂದು ಹೆಗ್ಗಳಿಕೆಯಾಗಿದೆ.
ಶೇ.25 ರಷ್ಟು ಕಾಯಿ ಕಟ್ಟಿದೆ ಶೇ.75 ರಷ್ಟು ಈಗಷ್ಟೆ ಹೂ ಬಿಟ್ಟಿದೆ. ಪ್ರತಿವರ್ಷ ಏಪ್ರಿಲ್‌ನಲ್ಲಿ ಕಟಾವುಆರಂಭವಾಗುತ್ತಿತ್ತು. ಆದರೆ ಈ ಬಾರಿ ಮೇ, ಜೂನ್‌ಗೆ ಕಟಾವಿಗೆ ಬರಲಿದೆ. ಚಿಕ್ಕಬಳ್ಳಾಪುರ ಕೋಲಾರಭಾಗದಲ್ಲಿರುವ ತಳಿಗಳೆ ಬೇರೆ ನಮ್ಮ ಜಿಲ್ಲೆಯಲ್ಲಿರುವತಳಿಗಳೆ ಬೇರೆ. ನಮ್ಮ ಜಿಲ್ಲೆ ಮಾವಿಗೆ ಹೆಚ್ಚು ಬೇಡಿಕೆ ಇದೆ ಹಾಗಾಗಿ ವಿಳಂಬವಾದರೂ ಬೆಲೆ ಕುಸಿತದ ಆತಂಕವಿಲ್ಲ -ಮಂಜು, ಉಪಾಧ್ಯಕ್ಷರು ಮಾವು ಬೆಳೆಗಾರರ ಸಂಘ
ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಮಾವುಕಟಾವಾಗುತ್ತಿತ್ತು. ಆದರೆ ನಿರಂತರವಾಗಿಸುರಿದ ಮಳೆಯಿಂದಾಗಿ ಶೀತ ಹೆಚ್ಚಾಗಿ ಫೆ.ಕಾಲಿಟ್ಟಿದ್ದರು ಈಗಷ್ಟೆ ಶೇ.50ರಷ್ಟು ಮಾವುಹೂ ಬಿಟ್ಟಿದೆ. ಈ ಬಾರಿ ಮಾವು ಮಾರುಕಟ್ಟೆಪ್ರವೇಶ ಮಾಡುವುದು ವಿಳಂಬವಾಗಲಿದೆ. ಹೆಚ್ಚು ಇಳುವರಿ ಬರುವ ನೀರಿಕ್ಷೆಯೂ ಇದೆ. -ಹರೀಶ್ , ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ
-ಬಿ.ಟಿ.ಉಮೇಶ್, ಬಾಣಗಹಳ್ಳಿ