Advertisement
ಶಾಲಾ-ಕಾಲೇಜಿನಲ್ಲಿ ಹಿಜಾಬ್ ಧರಿಸುವ ವಿಚಾರದಲ್ಲಿ ಮೊದಲು ವಿವಾದ ಹುಟ್ಟಿ ಅದು ನ್ಯಾಯಾಯಲದ ಮೆಟ್ಟಲೇರಿ ತೀರ್ಪು ಬಂದ ಬಳಿಕ ವಿವಾದ ತಣ್ಣಗಾಗಿದ್ದ ವೇಳೆ, ಯುಗಾದಿ ಹಬ್ಬದಲ್ಲಿ ಕೆಲ ಹಿಂದೂಪರ ಸಂಘಟನೆ ಹಲಾಲ್ ಮಾಡಿದ ಮಾಂಸ ಖರೀದಿ ಮಾಡಬಾರದು. ಜಟ್ಕಾ ಕಟ್ ಮಾಂಸವನ್ನು ಖರೀದಿಸಬೇಕೆಂದು ಕರಪತ್ರಗಳ ಮೂಲಕ ಪ್ರಚಾರ ನಡೆಸಿದ್ದರು. ಅದು ಕೂಡ ಕೆಲವೊಂದು ಪ್ರಭಾವ ಬೀರಿತ್ತು. ಬಳಿಕ ಮಸೀದಿ ಗಳಲ್ಲಿ ಧ್ವನಿ ವರ್ಧಕಗಳಿಂದ ಶಬ್ದ ಮಾಲಿನ್ಯವಾಗುತ್ತದೆ. ಅದರ ವಿರುದ್ಧ ದೇವಾಲಯಗಳಲ್ಲಿ ಹನುಮಾನ ಚಾಲೀಸಾ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಮಾವು ಹಿಂದೂಗಳ ಮಂಡಿಯಲ್ಲಿ ಖರೀದಿ ಮಾಡಬೇಕೆಂದು ವಿವಾದ ಹುಟ್ಟುಕೊಂಡಿದ್ದು, ಇದರಿಂದ ಮಾವು ಬೆಳೆಯುವ ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಮನೆ ಮಾಡಿದೆ.
Related Articles
Advertisement
ಮಾವು ಬೆಳೆಗಾರರಿಗೆ ತೊಂದರೆ ಆಗಲ್ಲ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಮಾವು ಬಹುತೇಕ ಕೋಲಾರ ಜಿಲ್ಲೆಯ ಶ್ರೀನಿ ವಾಸಪುರದಲ್ಲಿ ಮಾರಾಟವಾಗುತ್ತದೆ. ಈಗಾಗಲೇ ರೈತರಿಂದ ಮಾವು ತೋಟಗಳನ್ನು ಕೆಲವರು ಗುತ್ತಿಗೆ ಪಡೆದಿದ್ದರಿಂದ ಸಹಜವಾಗಿ ಮಾವು ಬೆಳೆಗಾರರಗೆ ತೊಂದರೆ ಆಗುವುದಿಲ್ಲ. ಕನಿಷ್ಠ ಒಂದು ವರ್ಷದಿಂದ ಐದು ವರ್ಷದವರೆಗೆ ತೋಟ ಗುತ್ತಿಗೆ ನೀಡಿದ್ದರಿಂದ ವ್ಯಾಪಾರಸ್ಥರೇ ತೋಟ ನಿರ್ವಹಣೆ ಮಾಡಿ ಇಂತಿಷ್ಟು ದರವನ್ನು ನಿಗದಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದ್ದಾರೆ. ಮತ್ತೂಂದೆಡೆ ಹಣ್ಣುಗಳ ರಾಜ ಮಾವು ಮಾರಾಟದ ಮೇಲೆ ಧರ್ಮದ ಕರಿನೆರಳು ಬೀಳುತ್ತಿರುವುದಕ್ಕೆ ಸcತಃ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದೆ. ವ್ಯಾಪಕ ಮಳೆ, ಬಿಸಲಿನ ಪ್ರಭಾವದಿಂದ ಹೂವು ಉದರಿದ್ದು, ಹೀಗಾಗಿ 70 ಸಾವಿರ ಟನ್ ಮಾವು ಬರುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ರೈತರು ಮತ್ತು ವ್ಯಾಪಾರಿಗಳ ಮಧ್ಯೆ ನಂಬಿಕೆ ಆಧಾರದ ಮೇಲೆ ವ್ಯಾಪಾರ ನಡೆಸುತ್ತಿದ್ದಾರೆ. ಶೇ.90ರಷ್ಟು ತೋಟವನ್ನು ರೈತರು ಗುತ್ತಿಗೆ ನೀಡಿದ್ದಾರೆ. –ರಮೇಶ್, ಉಪನಿರ್ದೇಶಕ ತೋಟಗಾರಿಕೆ ಇಲಾಖೆ, ಚಿಕ್ಕಬಳ್ಳಾಪುರ
ಮಧ್ಯೆ ವಿಷ ಬೀಜ ಬಿತ್ತನೆ ಮಾಡುವ ಕೆಲಸ ಯಾರೂ ಮಾಡಬಾರದು. ಅದಕ್ಕೆ ನಮ್ಮ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಕೆಲವು ಮತೀಯ ಶಕ್ತಿಗಳು ಮಾಡುವ ಕುತಂತ್ರದಿಂದ ರೈತರಿಗೆ ತೊಂದರೆ ಆಗುತ್ತದೆ. ಸಿಎಂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮಾವು ಮಾರಾಟದ ಮೇಲೆ ಯಾವುದೇ ಧಾರ್ಮಿಕ ಕರಿನೆರಳು ಬೀಳದಂತೆ ಕ್ರಮ ಕೈಗೊಳ್ಳಬೇಕು. – ಭಕ್ತರಹಳ್ಳಿ ಭೈರೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತ ಸಂಘ ಹಾಗೂ ಹಸಿರುಸೇನೆ.
ರಾಜ್ಯದಲ್ಲಿ ಮಾವು ಬೆಳೆಗಾರರು ಕಳೆದ ಎರಡು ವರ್ಷಗಳಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಮಗೆ ಯಾವುದು ಭೇದ ಭಾವ ಇಲ್ಲ. ಯಾರು ದರ ಜಾಸ್ತಿ ಕೊಡ್ತಾರೆ ಅವರಿಗೆ ಮಾವು ಮಾರಾಟ ಮಾಡುತ್ತೇವೆ. ನಂಬಿಕೆಯಿಂದ ನಡೆಯುತ್ತಿದೆ. ರೈತರು, ವ್ಯಾಪಾರಿಗಳು ಪರಸ್ಪರ ವಿಶ್ವಾ ಸ ದಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಧಕ್ಕೆ ಬರುವ ಕೆಲಸ ಯಾರೂ ಮಾಡಬಾರದು. – ಕೆ.ವಿ.ನಾಗರಾಜ್, ರಾಜ್ಯ ಮಾವು ಅಭಿವೃದ್ಧಿ ನಿಗಮ ಅಧ್ಯಕ್ಷ.
-ಎಂ.ಎ.ತಮೀಮ್ ಪಾಷ