Advertisement

Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ

12:46 AM Nov 05, 2024 | Team Udayavani |

ಮಂಗಳೂರು: ಐಟಿ ಕ್ಷೇತ್ರದ ಪ್ರಮುಖ ತಾಣವಾ ಗಲು ಮಂಗಳೂರಿಗೆ ಎಲ್ಲ ಅರ್ಹತೆ ಇದ್ದು, ಸಾಕಷ್ಟು ಅವ ಕಾಶಗಳೂ ಸೃಷ್ಟಿಯಾಗಲಿವೆ.ಇದು ವಿಶ್ವದ ಮುಂಚೂಣಿಯ ಐಟಿ ಕಂಪೆನಿ ಎಂ-ರಿಸಲ್ಟ್ ಸ್ಥಾಪಕ, ಸಿಇಒ ಚಂದ್ರಶೇಖರ್‌ ನಾಯ್ಕ (ಸೇಖರ್‌ ನಾಯ್ಕ) ಅವರ ಸ್ಪಷ್ಟ ನುಡಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಯನ್ನೂ ಪಡೆದು ಹುಟ್ಟೂರಿಗೆ ಆಗಮಿಸಿ ರುವ ಚಂದ್ರಶೇಖರ್‌ “ಉದಯವಾಣಿ’ ಜತೆ ಉದ್ಯಮ ಕ್ಷೇತ್ರದ ತಮ್ಮ ಪಯಣ, ಯಶೋಗಾಥೆಗಳನ್ನು ಹಂಚಿಕೊಂಡರು.

Advertisement

ಮಂಗಳೂರಿನಲ್ಲೂ ಮೂಲ ಸೌಕ ರ್ಯಗಳ ಅಭಿವೃದ್ಧಿಗೆ ಒತ್ತು ನೀಡಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಯೂ ಅವಕಾ ಶಗಳು ಸೃಷ್ಟಿಯಾಗಲಿವೆ ಎಂದರು.

ಮಂಗಳೂರಿನ ಕುರ್ನಾಡು ಎಂಬ ಹಳ್ಳಿಯಲ್ಲಿ 1961ರಲ್ಲಿ ಜನಿಸಿ, ಅಲ್ಲಿಂದ ಅಮೆರಿಕಕ್ಕೆ ತೆರಳಿ ವಿಶ್ವದ ಮುಂಚೂಣಿಯ ಐಟಿ ಕಂಪೆನಿ ಎಂ-ರಿಸಲ್ಟ್ ಸ್ಥಾಪಿಸಿ ಯಶಸ್ವಿ ಯಾದವರು ಚಂದ್ರಶೇಖರ್‌ ನಾಯ್ಕ.

ಸಾವಿರಾರು ಉದ್ಯೋಗಾಕಾಂಕ್ಷಿ ಗಳಿಗೆ, ಅದರಲ್ಲೂಮಂಗಳೂರು ಮೂಲದವರಿಗೆ ಉದ್ಯೋಗ ಕೊಡಿಸಿದವರು. ಸದ್ಯ ಬೆಂಗಳೂರು, ಮುಂಬಯಿ, ಮಂಗ ಳೂರು, ಯುಎಸ್‌ಎ, ಇತ್ತೀಚೆಗೆ ಜಪಾನ್‌ನಲ್ಲೂ ಎಂರಿಸಲ್ಟ್ ಕಂಪೆನಿ ಆರಂಭಿಸಿದ್ದಾರೆ. ವಿಶ್ವದ ಖ್ಯಾತ ಕಂಪೆನಿಗಳಿಗೆ ತಮ್ಮ ಕಂಪೆನಿ ಮೂಲಕ ಸೇವೆ ನೀಡುವ ಒದಗಿಸುತ್ತಿದ್ದಾರೆ.

ಉದಯವಾಣಿಯೂ ಸ್ಫೂರ್ತಿ
ನಾವು ಹಳ್ಳಿಯಲ್ಲಿ ಬಾಲ್ಯ ಕಳೆದವರು. ಟಿವಿ, ಇಂಟರ್‌ನೆಟ್‌ ಇರದ ಕಾಲದಲ್ಲಿ ಸುದ್ದಿಗಳಿಗೆ ಉದಯವಾಣಿ, ತರಂಗ ಓದಿ ಬೆಳೆದವರು.

Advertisement

ಅದರಲ್ಲಿನ ಯಶಸ್ವಿ ವ್ಯಕ್ತಿಗಳ ಯಶೋಗಾಥೆಗಳೂ ಸ್ಫೂರ್ತಿ ತುಂಬಿವೆ. ಆಗ ಅಮೆರಿಕಕ್ಕೆ ಹೋಗುವ ಅವಕಾಶ ಬಹಳ ಕಡಿಮೆ ಇತ್ತು. ಅನೇಕರು ಮುಂಬಯಿಗೆ ಹೋಗುತ್ತಿ ದ್ದರು. ಮಂಗಳೂರಿನ ಎಸ್‌ಡಿಎಂ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ಬಿಬಿಎಂ ಮಾಡಿ ಮುಂಬಯಿಗೆ ಹೋದೆ. ಆಗಷ್ಟೇ ಎಂಬಿಎ ಹೆಚ್ಚು ಮಹತ್ವ ಪಡೆಯುತ್ತಿತ್ತು. ಹಾಗಾಗಿಬಳಿಕ ಯುಎಸ್‌ಎಗೆ ತೆರಳಿ ಡೆಲವರ್‌ ವಿವಿಯಿಂದ ಎಂಬಿಎ ಪೂರೈಸಿದೆ. ಐಬಿಎಂ ಗ್ಲೋಬಲ್‌ನಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದೆ. ಬಳಿಕ 2004 ರಲ್ಲಿ ಎಂ-ರಿಸಲ್ಟ್ ಹುಟ್ಟು ಹಾಕಿದೆ. ಸವಾಲುಗಳು, ಹಿನ್ನಡೆ ಎಲ್ಲದರ ಹೊರ ತಾಗಿಯೂ ಕಂಪೆನಿ ಪ್ರಗತಿ ಸಾಧಿಸಿದೆ. ಈಗ ವಿಶ್ವದ ಪ್ರಮುಖ ಕಂಪೆನಿಗಳಿಗೆ ಡಾಟಾ, ಅನಾಲಿಟಿಕ್ಸ್‌, ಜೆನ್‌ಎಐ ಸೇವೆ ನೀಡುತ್ತಿದೆ ಎನ್ನುತ್ತಾರೆ ನಾಯ್ಕ. ಇವರು ಎಂರಿಸಲ್ಟ್ ಮಾತ್ರವಲ್ಲದೆ ಭಾರತೀಯ ಫಿನ್‌ಟೆಕ್‌ ಮಾರುಕಟ್ಟೆ ಆಧರಿತ, ಲೆಕ್ಕಪರಿಶೋಧನೆಯ ಪರಿ ಹಾರ ನೀಡುವ ಚೆಗೌಟ್‌ ಹಾಗೂ ವಾಯ್ಸ ಗ್ಲಾನ್ಸ್‌ ಎನ್ನುವ ಕಂಪೆನಿಗಳನ್ನೂ ಸ್ಥಾಪಿಸಿದ್ದಾರೆ.

ಇಪ್ಪತ್ತು ವರ್ಷ ಹಿಂದಿನ ಹಾಗೆ ಈಗ ಪ್ರಪಂಚವಿಲ್ಲ, ಸಾಕಷ್ಟು ಬದಲಾಗಿದೆ.ತಂತ್ರಜ್ಞಾನ ಬದಲಾಗಿದೆ. ಈಗ ಕಲಿಕೆ ನಿರಂತರವಾಗಿ ಬೇಕು. ಆ ಕುರಿತ ಹಸಿವು ಇದ್ದರೆ ಯಶಸ್ಸು ಸಾಧ್ಯ. ಅಮೆರಿಕದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ವರ್ಷವಿಡೀ ನಿರಂತರ ಮೌಲ್ಯಮಾಪನ. ಅಲ್ಲಿನ ಪರೀಕ್ಷೆ ಓಪನ್‌ ಬುಕ್‌ ಮಾದರಿ, ನಮ್ಮಲ್ಲಿ ಕ್ಲೋಸ್ಡ್ ಬುಕ್‌ ಮಾದರಿ. ನಮ್ಮಲ್ಲಿ ಅಂತಿಮ ಪರೀಕ್ಷೆಗೆ ಹೆಚ್ಚು ಮಹತ್ವ. ಅದೇನೇ ಇರಲಿ, ಇದು ಯಾವುದೂ ವ್ಯಕ್ತಿಯ ಪ್ರಗತಿಗೆ ಅಡ್ಡಿಯಾಗದು. ಮೂಲ ಕಲಿಕೆ ಸರಿ ಇರುವುದೇ ಮುಖ್ಯ ಎನ್ನುವುದು ಅವರ ಮಂತ್ರ.

ಮಂಗಳೂರಿಗನೆಂಬ ಹೆಮ್ಮೆ
ಇರುವುದು ಅಮೆರಿಕದಲ್ಲಾದರೂ ನಾನು ಮಂಗಳೂರಿನವನು ಎನ್ನುವುದು ನನಗೆ ಹೆಮ್ಮೆ. ಅಮೆರಿಕದಲ್ಲಿ ಭಾರತೀಯ ವೃತ್ತಿಪರರಿಗೆ ಶ್ರಮಜೀವಿಗಳೆಂಬ ಕಾರಣಕ್ಕೆ ಬಹಳ ಗೌರವ ಇದೆ. ಆದರೆ ಸದ್ಯ ಅಲ್ಲಿನ ನೀತಿಯಿಂದಾಗಿ ಗ್ರೀನ್‌ಕಾರ್ಡ್‌ ಪಡೆಯುವುದು ತುಸು ಕಷ್ಟ. ಮುಂದೆ ಇದು ಸರಿಹೋಗುವ ಸಾಧ್ಯತೆಗಳಿವೆ.

ವಿಶ್ವದಲ್ಲೇ ಕರಾವಳಿಯ ಯುವ ವೃತ್ತಿಪರರಿಗೆ ಸಾಕಷ್ಟು ಬೇಡಿಕೆ ಇದೆ. ಇಲ್ಲಿನವರು ಸ್ಮಾರ್ಟ್‌, ಅತ್ಯಾಧುನಿಕ ಮನೋಭೂಮಿಕೆ ಇರುವವರು, ಶ್ರಮ ಜೀವಿಗಳು.

Advertisement

Udayavani is now on Telegram. Click here to join our channel and stay updated with the latest news.

Next