Advertisement

ಮಂಗಳೂರು : ನಿಲ್ಲಿಸಿದ್ದ ಬಸ್‌ನಲ್ಲಿ ಹಣ ಕಳವು : ಸಿಸಿ ಕೆಮರಾದಲ್ಲಿ ದೃಶ್ಯ ದಾಖಲು

09:46 PM Jun 13, 2022 | Team Udayavani |

ಮಂಗಳೂರು : ನಿಲ್ಲಿಸಿದ್ದ ಬಸ್‌ನಿಂದ ಹಣ ಕಳವು ಮಾಡಲಾಗಿದೆ ಎನ್ನಲಾದ ಸಿಸಿ ಕೆಮರಾ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಉಪ್ಪಿನಂಗಡಿ-ಸ್ಟೇಟ್‌ಬ್ಯಾಂಕ್‌ ನಡುವೆ ಸಂಚರಿಸುವ ಖಾಸಗಿ ಬಸ್‌ನ್ನು ಸ್ಟೇಟ್‌ಬ್ಯಾಂಕ್‌ನಲ್ಲಿ ನಿಲ್ಲಿಸಿದ ಬಳಿಕ ಚಾಲಕ ಮತ್ತು ನಿರ್ವಾಹಕ ಊಟಕ್ಕೆಂದು ತೆರಳಿದ್ದು ಈ ಸಂದರ್ಭ ಬಸ್‌ನೊಳಗೆ ಪ್ರವೇಶಿಸಿದ ಓರ್ವ ಬಸ್‌ನಲ್ಲಿದ್ದ ಹಣ ಕಳವು ಮಾಡಿದ್ದಾನೆನ್ನಲಾಗಿದೆ.

ಈ ವೇಳೆ ಬಸ್‌ನಲ್ಲಿ ಬೇರೆ ಯಾರೂ ಇರಲಿಲ್ಲ. ಕಳವು ಮಾಡಲಾಗಿದೆ ಎನ್ನಲಾದ ದೃಶ್ಯ ಬಸ್‌ನಲ್ಲಿದ್ದ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಬಸ್‌ ನಿರ್ವಾಹಕ ಬ್ಯಾಗ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಹಣವನ್ನು ಕಳ್ಳ ದೋಚಿದ್ದಾನೆನ್ನಲಾಗಿದೆ. ಈ ಬಗ್ಗೆ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಕೇರಳ ಸಿಎಂ ಭಾಗವಹಿಸುವ ಸಭೆ-ಸಮಾರಂಭಗಳಲ್ಲಿ ಕಪ್ಪು ಬಟ್ಟೆ, ಕಪ್ಪು ಮಾಸ್ಕ್ ನಿಷೇಧ !

Advertisement

Udayavani is now on Telegram. Click here to join our channel and stay updated with the latest news.

Next