Advertisement
ಮಾಹಿತಿ ಹಕ್ಕು ಅಧಿನಿಯಮ ಅನ್ವಯ ಲಭಿಸಿರುವ ಮಾಹಿತಿಯಂತೆ ರಾಜ್ಯದ ಮೈಸೂರು, ಮೈಸೂರು ನಗರ, ಕಲಬುರಗಿ, ವಿಜಯ ನಗರ, ಬೆಳಗಾವಿ, ಚಿತ್ರದುರ್ಗ, ವಿಜಯಪುರ, ಚಾಮರಾಜನಗರ, ಹುಬ್ಬಳ್ಳಿ-ಧಾರವಾಡ, ರಾಯಚೂರು, ಶಿವಮೊಗ್ಗ, ಬಾಗಲ ಕೋಟೆ, ಹಾಸನ, ಮಂಗಳೂರು ಪೊಲೀಸ್ ಕಮಿಷನರೆಟ್, ದ.ಕ. ಜಿಲ್ಲೆ, ರಾಮನಗರ ಮತ್ತು ಕೊಪ್ಪಳ ಜಿಲ್ಲಾ ಪೊಲೀಸ್ ಪೈಕಿ ದ.ಕ. ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಶಿಕ್ಷೆಯ ಪ್ರಮಾಣದಲ್ಲಿ ಅನಂತರದ ಸ್ಥಾನದಲ್ಲಿ ಮಂಗಳೂರು ಪೊಲೀಸ್ ಕಮಿಷನರೆಟ್ ಇದೆ. ರಾಮನಗರ ಅತ್ಯಂತ ಕಡಿಮೆ (ಶೇ.0.55) ಪ್ರಮಾಣ ಹೊಂದಿದೆ. ಇಲ್ಲಿ 1,461 ಪ್ರಕರಣಗಳ ಪೈಕಿ 8 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.
ಪ್ರತ್ಯೇಕ ವ್ಯವಸ್ಥೆ
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ವಿಶೇಷ ಗಮನ ಹರಿಸುವುದಕ್ಕಾಗಿ ಪೊಲೀಸ್ ಆಯುಕ್ತರು ಇತ್ತೀಚೆಗೆ ಕೋರ್ಟ್ ಮಾನಿಟರಿಂಗ್ ಸೆಲ್ ಅನ್ನು ಆರಂಭಿಸಿದ್ದರು. ಪ್ರತೀ ಎಸಿಪಿ ಹಂತದಲ್ಲಿಯೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ನಿರಂತರ ಪರಾಮರ್ಶೆಗೆ ಸೂಚನೆ ನೀಡಿದ್ದರು.