Advertisement
ಅವರು ಮಂಗಳವಾರ ಕೊಣಾಜೆ ಮಂಗಳಗಂಗೋತ್ರಿಯ ಸಿ.ವಿ. ರಾಮನ್ ವೃತ್ತದಲ್ಲಿ ವಿ.ವಿ.ಯ ವಿವಿಧ ಶೈಕ್ಷಣಿಕ ಮತ್ತು ಹಾಸ್ಟೆಲಿನ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಸಂದರ್ಭ ಮಾತನಾಡಿದರು.
Related Articles
Advertisement
ಯುಯುಸಿಎಂಎಸ್ ತಪ್ಪು; ವಿದ್ಯಾರ್ಥಿಗಳಿಗೆ ಮಾರಕಪರೀûಾಂಗ ಕುಲಸಚಿವ ಪ್ರೊ| ಪಿ.ಎಲ್. ಧರ್ಮ ಮಾತನಾಡಿ, ಯುಯುಸಿಎಂಎಸ್ ಮಾಡುತ್ತಿರುವ ತಪ್ಪಿನಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಈ ವಿಚಾರದಲ್ಲಿ ಸರಕಾರದ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇವೆ. ಯುಯುಸಿಎಂಎಸ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಪ್ರತೀ ಬಾರಿಯೂ ಫಲಿತಾಂಶ ನೀಡುವ ಮೊದಲು ರಾಜ್ಯ ತಂಡದ ಜತೆಗೆ ಸಂಪರ್ಕ ಇಡಬೇಕಾಗಿದೆ. ಇದರಿಂದ ಸಮಯ ಹಾಳಾಗುತ್ತಿದೆ. ವಿ.ವಿ.ಗಳು ನೇರವಾಗಿ ಅಂಕಪಟ್ಟಿ ಕೊಡಲೇಬಾರದು ಅನ್ನುವ ಆದೇಶ ಇತ್ತು. ಆದರೆ ಇದೀಗ ಅಂಕಪಟ್ಟಿ ನೀಡಬಹುದು ಎಂದು ರಾಜ್ಯಪಾಲರು ಆದೇಶವನ್ನು ಪರಿಷ್ಕರಿಸಿದ್ದಾರೆ. ಅಂಕಪಟ್ಟಿಯಲ್ಲಿ ತಪ್ಪಾದರೆ ಅದನ್ನು ವಿ.ವಿ.ಯೇ ಭರಿಸಬೇಕಾಗುತ್ತದೆ. ಜ. 9, 10ರಂದು ರಾಜ್ಯ ಎಲ್ಲ ವಿ.ವಿ.ಗಳ ಮುಖ್ಯಸ್ಥರ ಸಭೆಯಲ್ಲಿ ಯುಯುಸಿಎಂಎಸ್ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಕಾಲರ್ ಶಿಪ್‌ನ ಜವಾಬ್ದಾರಿ ವಹಿಸಿಕೊಂಡಿದೆ. 24 ವಿ.ವಿ.ಗಳಿಗೂ ಒಂದೇ ರೀತಿಯ ಕಾರ್ಯಕ್ರಮ ಸರಕಾರ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಕೋಡ್ ತಪ್ಪಾಗಿ ಬರೆದರೆ ಇಡೀ ಫಲಿತಾಂಶದ ವ್ಯವಸ್ಥೆಗೆ ಸಮಸ್ಯೆಯಾಗುತ್ತದೆ ಎಂದರು.