Advertisement
ನಗರದಲ್ಲಿ 60 ವಾರ್ಡ್ಗಳ ತ್ಯಾಜ್ಯ ವಿಲೇವಾರಿಯ ಹೊಣೆಯನ್ನು ಮಹಾ ನಗರ ಪಾಲಿಕೆಯೇ ಹೊತ್ತುಕೊಂಡಿದ್ದು, ಸ್ವತ್ಛ ಭಾರತ್ ಮಿಷನ್ ಯೋಜನೆಯಡಿ ಸುಮಾರು 30 ಕೋ.ರೂ. ವೆಚ್ಚದಲ್ಲಿ 107 ಸಣ್ಣ ವಾಹನ, 30 ಟಿಪ್ಪರ್, 16 ಕಾಂಪ್ಯಾಕ್ಟರ್ ಸೇರಿದಂತೆ 153 ವಾಹನಗಳನ್ನು ಖರೀದಿಸಲಾಗಿದೆ. ಖರೀದಿಯ ಬಳಿಕವೂ ಈ ವಾಹನಗಳು ಸುಮಾರು 6 ತಿಂಗಳು ಯಾರ್ಡ್ನಲ್ಲೇ ನಿಲ್ಲಿಸಿ ಒಂದಷ್ಟು ಭಾಗಗಳು ಗಾಳಿ, ಮಳೆ, ಬಿಸಿಲಿಗೆ ತುಕ್ಕು ಹಿಡಿದಿತ್ತು. ಒಂದು ವರ್ಷದಿಂದ ಇವುಗಳನ್ನು ತ್ಯಾಜ್ಯ ಸಂಗ್ರಹ ಕಾರ್ಯದಲ್ಲಿ ಬಳಕೆ ಮಾಡಲಾಗುತ್ತಿದೆ.
Related Articles
ಸರ್ವಿಸ್ ಸೆಂಟರ್ನಲ್ಲಿ ವಾಹನವನ್ನು ಸರ್ವಿಸ್ ಮಾಡಿಸಿದರೆ ಸಮಯ ವ್ಯಯವಾಗುತ್ತದೆ. ತ್ಯಾಜ್ಯ ಸಂಗ್ರಹಕ್ಕೂ ತೊಂದರೆ. ಆದ್ದರಿಂದ ಕೆಎಸ್ಆರ್ಟಿಸಿ ಡಿಪೋದಲ್ಲಿ ಸರ್ವಿಸ್ ಮಾಡಿಸುವ ನಿಟ್ಟಿನಲ್ಲಿ ಚಿಂತನೆಯಿದ್ದು, ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆಗಳೂ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
Advertisement
ಎಲೆಕ್ಟ್ರಿಕ್ ವಾಹನದಲ್ಲಿಲ್ಲ ಮಹಿಳಾ ಚಾಲಕಿಯರುಇಕ್ಕಟ್ಟಾದ ರಸ್ತೆಗಳಲ್ಲಿ ತ್ಯಾಜ್ಯ ಸಂಗ್ರಹಕ್ಕೆ 24 ಎಲೆಕ್ಟ್ರಿಕಲ್ ತ್ರಿಚಕ್ರ ವಾಹನಗಳನ್ನು ಖರೀದಿಸಲಾಗಿತ್ತು. ಇದನ್ನು ಚಲಾಯಿಸಲು ಮಹಿಳಾ ಚಾಲಕಿಯರಿಗೆ ತರಬೇತಿಯನ್ನೂ ನೀಡಲಾಗಿತ್ತು. ಆದರೆ ಪ್ರಸ್ತುತ ಈ ವಾಹನಗಳಲ್ಲಿ ಕೆಲವು ವಾಹನಗಳಿಗೆ ಮಾತ್ರ ಮಹಿಳಾ ಚಾಲಕಿಯರಿದ್ದು, ಉಳಿದೆಲ್ಲ ವಾಹನಗಳನ್ನು ಪುರುಷರೇ ನಿರ್ವಹಿಸುತ್ತಿದ್ದಾರೆ. ಈ ವಾಹನಗಳಲ್ಲೂ ಬ್ಯಾಟರಿ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳು ಕಂಡು ಬರುತ್ತಿವೆ. ವಾಹನಗಳ ನಿರ್ವಹಣೆ
ಕೂಳೂರು ಬಳಿಯ ಅಧಿಕೃತ ಸರ್ವಿಸ್ ಸೆಂಟರ್ನಲ್ಲಿ ವಾಹನಗಳ ನಿರ್ವಹಣೆ ಮಾಡಲಾಗುತ್ತಿದೆ. ಕೂಳೂರು ಮತ್ತು ಪಂಪ್ವೆಲ್ನಲ್ಲಿರುವ ಯಾರ್ಡ್ನಲ್ಲಿಯೂ ಸಣ್ಣಪುಟ್ಟ ರಿಪೇರಿ ಮಾಡಲಾಗುತ್ತಿದೆ. ವಾಹನಗಳ ಬಾಳಿಕೆ ಇತರ ವಾಹನಗಳಿಗಿಂತ ಅವಧಿ ಕಡಿಮೆ ಇರುವುದರಿಂದ ಅವುಗಳನ್ನು ಉತ್ತಮವಾಗಿ ಇಟ್ಟುಕೊಳ್ಳುವಂತೆ ಚಾಲಕರಿಗೆ ಸೂಚನೆಗಳನ್ನು ನೀಡಲಾಗಿದೆ.
– ಮನೋಜ್ ಕುಮಾರ್ ಕೋಡಿಕಲ್, ಮೇಯರ್ -ಭರತ್ ಶೆಟ್ಟಿಗಾರ್