Advertisement
ಅವರು ಸ್ಕೂಟರ್‌ನಲ್ಲಿ ನಂತೂರು ಜಂಕ್ಷನ್‌ನಿಂದ ಕೆಪಿಟಿ ಕಡೆಗೆ ಹೋಗುತ್ತಿದ್ದ ಅವರು ಟ್ಯಾಂಕರ್ ಢಿಕ್ಕಿಯಾಗಿ ಹೆದ್ದಾರಿಗೆ ಬಿದ್ದರು. ಟ್ಯಾಂಕರ್‌ನ ಹಿಂಭಾಗದ ಚಕ್ರ ತಲೆಯ ಮೇಲೆಯೇ ಹರಿದು ಸ್ಥಳದಲ್ಲೇ ಮೃತಪಟ್ಟರು. ಕಣ್ಣೂರಿನ ವಾಚ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದ ಅವರು ಮಂಗಳ ವಾರವೂ ಕೆಲಸಕ್ಕೆ ತೆರಳಿದ್ದರು. 6ರಿಂದ 10 ಗಂಟೆಯ ವರೆಗೆ ಕೆಲಸ ಮಾಡಿ ಅನಂತರ ಬ್ಯಾಂಕ್‌ಗೆ ಹೋಗಿ ಕೂಡಲೇ ವಾಪಸ್ ಬರುವುದಾಗಿ ಹೇಳಿ ಹೋಗಿದ್ದರು.
ಬಿಜೆಪಿಯಲ್ಲಿ ಕ್ರಿಯಾಶೀಲರಾಗಿದ್ದ ಅವರು ಸ್ಥಳೀಯ ಬೂತ್ ಸಮಿತಿಯ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದರು. ಅವರ ಪತ್ನಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿವಾನಂದ ಅವರ ಓರ್ವ ಪುತ್ರಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದು ಇನ್ನೋರ್ವಳು ಎಲ್‌ಕೆಜಿಯಲ್ಲಿದ್ದಾಳೆ. ಶಿವಾನಂದ ಅವರು ತಾಯಿ, ಪತ್ನಿ, ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಶಿವಾನಂದ ಅವರನ್ನು ಕಳೆದುಕೊಂಡ ಕುಟುಂಬ ಆರ್ಥಿಕವಾಗಿಯೂ ಆಧಾರವನ್ನು ಕಳೆದುಕೊಂಡಂತಾಗಿದೆ.