Advertisement

Mangaluru: ರಾಹುಲ್ ಗಾಂಧಿ‌ ಬಗ್ಗೆ ಹೇಳಿಕೆ; ಶಾಸಕ ಡಾ. ಭರತ್ ಶೆಟ್ಟಿ ವಿರುದ್ದ FIR

02:17 PM Jul 10, 2024 | Team Udayavani |

ಮಂಗಳೂರು: ರಾಹುಲ್ ಗಾಂಧಿ (Rahul Gandhi) ಅವರ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಮಂಗಳೂರು ನಗರ ಉತ್ತರ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ (Y. Bharath Shetty) ಅವರ ವಿರುದ್ದ ಎಫ್.ಐ.ಆರ್. (FIR) ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.

Advertisement

ಕಾವೂರಿನಲ್ಲಿ‌ನಡೆದ ಪ್ರತಿಭಟನೆ ವೇಳೆ ಶಾಸಕರ ವೈ. ಭರತ್ ಶೆಟ್ಟಿ (Y. Bharath Shetty) ರಾಹುಲ್ ಗಾಂಧಿ (Rahul Gandhi) ಅವರ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.

ಈ ಬಗ್ಗೆ ಸ್ಥಳೀಯ ಕಾರ್ಪೊರೆಟರ್ ನೀಡಿರುವ ದೂರಿನಂತೆ ಎಫ್.ಐ.ಆರ್. (FIR) ದಾಖಲಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next