Advertisement

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

01:18 PM Nov 15, 2024 | Team Udayavani |

ಜಪ್ಪು ಮಾರ್ಕೆಟ್‌: ಜಪ್ಪು ಮಾರ್ಕೆಟ್‌ನಿಂದ ಗುಜ್ಜರಕೆರೆ ತೆರಳುವ ಹಾದಿಯಲ್ಲಿ ಮಳೆ ನೀರು ಹರಿಯುವ ತೋಡಿಗೆ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದಾಗಿ ಪಾದಚಾರಿಗಳಿಗೆ ಮತ್ತು ವಾಹನ ಸವಾರರ ಪಾಲಿಗೆ ಉಂಟಾಗಿದ್ದ ಅಪಾಯ ದೂರವಾಗಿದ್ದು, ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.

Advertisement

ಆದರೆ ತೆರೆದ ತೋಡಿನಲ್ಲಿ ಕೊಳಚೆ ಹರಿಯುತ್ತಿರುವ ಕೊಳಚೆ ನೀರು ತಡೆಗೆ ಯಾವುದೇ ಕ್ರಮ ಕೈಗೊಳ್ಳದ ಸ್ಥಳದಲ್ಲಿ ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ.

ಈ ಬಗ್ಗೆ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಿ ಮಾ. 30ರಂದು ‘ಜಪ್ಪು: ರಸ್ತೆ ಬದಿ ಚರಂಡಿಲ್ಲಿ ಕೊಳಚೆ ನೀರು’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಒಂದು ಸಮಸ್ಯೆ ಬಗೆ ಹರಿದಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನೊಂದು ಸಮಸ್ಯೆ ಹಾಗೇ ಬಾಕಿ ಇರುವುದು ಸ್ಥಳೀಯರ ಅಸಮಾಧಾನಕ್ಕೂ ಕಾರಣವಾಗಿದೆ.

ಕೂಡಲೇ ಈ ಬಗ್ಗೆ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next