Advertisement
ಕೇರಳ ತೃಶ್ಶೂರ್ ನಿವಾಸಿಗಳಾದ ಡೆವಿನ್, ಗಾಡ್ವಿನ್, ಅಮಲ್‌ಕೃಷ್ಣ ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಈಗಾಗಲೇ ಉಪ್ಪಳ ಬಾಲಕೃಷ್ಣ ಶೆಟ್ಟಿ, ಪೆರುವಾಯಿ ರೇಮಂಡ್ ಡಿ’ಸೋಜಾ, ನೀರುಮಾರ್ಗ ನಿವಾಸಿಗಳಾದ ರಮೇಶ್, ವಸಂತ್ ಕುಮಾರ್, ತಿರುವನಂತಪುರದ ಜಾನ್‌ಬಾಸ್ಕೋ, ತೃಶ್ಶೂರ್‌ನ ಶಿಜೋ ದೇವಸಿ, ಸತೀಶ್ ಬಾಬು, ಶಾಕೀರ್ ಹುಸೇನ್, ಸಜೀಶ್ ಎಂ., ವಿನೋಜ್ ಪಿ.ಕೆ., ಕಾರು ಚಾಲಕ ಬಿಪಿನ್‌ರಾಜ್‌ನನ್ನು ಬಂಧಿಸಲಾಗಿತ್ತು.
ಕೇರಳ ತೃಶ್ಶೂರ್‌ನಿಂದ ಬಂಧಿಸಲಾದ ಮೂವರು ಆರೋಪಿಗಳಿಂದ ಕೆಲವು ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನು ಮೂವರು ಆರೋಪಿಗಳ ಬಂಧನ ಬಾಕಿ ಇದೆ. ದರೋಡೆಕೋರರು ಮನೆಯವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು.