Advertisement

ಮಂಗಳೂರು ರಥಬೀದಿ ಶ್ರೀ ಶಾರದಾ ಮಹೋತ್ಸವ : ಶತಮಾನೋತ್ಸವದ ಹೊರೆಕಾಣಿಕೆ ಸಂಪನ್ನ

03:31 PM Sep 26, 2022 | Team Udayavani |

ಮಂಗಳೂರು : ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ ಆಚಾರ್ಯ ಮಠ ವಠಾರದ ಶ್ರೀ ಶಾರದಾ ಮಹೋತ್ಸವ ಈ ಬಾರಿ ಶತಮಾನೋತ್ಸವ ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಹೊರೆಕಾಣಿಕೆಯ ಬೃಹತ್ ಮೆರವಣಿಗೆಯು ನೆಹರೂ ಮೈದಾನದಿಂದ ಆರಂಭಗೊಂಡು ವೈಭವಯುತವಾಗಿ ಸಂಪನ್ನಗೊಂಡಿತು.

Advertisement

ಶಾಸಕ ಎಂ. ವೇದವ್ಯಾಸ ಕಾಮತ್‌ರವರು ಸಾಂಪ್ರದಾಯಿಕವಾಗಿ ಈ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಉಪಮೇಯರ್ ಪೂರ್ಣಿಮಾ  ಉಪಸ್ಥಿತರಿದ್ದರು. ನಗರದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಂಶ್‌ಕುಮಾರ್, ಎಸಿಪಿ (ಟ್ರಾಫಿಕ್) ಗೀತಾ ಕುಲಕರ್ಣಿ ಮುಖ್ಯ ಅತಿಥಿಗಳಾಗಿದ್ದರು.

ಮಾಜಿ ಶಾಸಕ ಜೆ.ಆರ್.ಲೋಬೋ, ಮಾಜಿ ಎಂಎಲ್‌ಸಿ ಐವನ್ ಡಿ’ಸೋಜಾ, ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಕೋಶಾಧಿಕಾರಿ ಎಂ. ವಿಠಲ ಆಚಾರ್ಯ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಪಂಡಿತ ನರಸಿಂಹ ಆಚಾರ್ಯ, ಸಮಿತಿಯ ಸಂಚಾಲಕರಾದ ಅರುಣ್ ಪಡಿಯಾರ್, ಗಣೇಶ ಬಾಳಿಗಾ, ಸುಬ್ರಹ್ಮಣ್ಯ ಭಟ್, ವಾಮನ್ ಪೈ, ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ, ಗಣೇಶ್ ಕಾಮತ್ ಹಾಗೂ ಸಹಸ್ರಾರು ಭಕ್ತಾಧಿಗಳು ವಾಹನಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಹೊರೆಕಾಣಿಕೆಯಲಿ ದೇಶ ಮತ್ತು ವಿದೇಶದಿಂದ ಆಗಮಿಸಿದ ಸುಮಾರು 60 ಹೊರೆಕಾಣಿಕೆಯ ವಾಹನಗಳು ಭಾಗವಹಿಸಿದ್ದವು. ಕಾರ್ಯಕ್ರಮವನ್ನು ನರೇಶ್ ಕಿಣಿ ಮತ್ತು ವಿನೋದ್ ಕಾಮತ್ ಇವರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next