Advertisement
ಮಂಗಳೂರು ಮೀನುಗಾರಿಕೆ ಬಂದರಿನಲ್ಲಿನ ಆಳ ಸಮುದ್ರ ಬೋಟ್, ಪರ್ಸಿನ್, ಟ್ರಾಲ್ ಬೋಟ್ ಹಾಗೂ ಇತರ ಬೋಟ್‌ಗಳ ಸಹಿತ ಸುಮಾರು 1,200 ಬೋಟ್‌ಗಳು ಬಂದರಿನಲ್ಲಿಯೇ ಲಂಗರು ಹಾಕಿದ್ದವು. ವಿವಿಧ ಸಂಘಟನೆಗಳ ಕಾರ್ಮಿಕರ ಸಹಿತ 1,500ಕ್ಕೂ ಹೆಚ್ಚಿನ ಮಂದಿ ಉಡುಪಿ ರಾಸ್ತಾ ರೋಕೋದಲ್ಲಿ ಭಾಗವಹಿಸಿದ್ದರು.
ಮಂಗಳೂರು/ಮಲ್ಪೆ: ಉಡುಪಿಯಲ್ಲಿ ರವಿವಾರ ನಡೆದ ಮೀನುಗಾರರ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ಮೀನು ವ್ಯವಹಾರದಲ್ಲಿ ಸುಮಾರು 11 ಕೋಟಿ ರೂ. ನಷ್ಟವಾಗಿದೆ. ಸಾಮಾನ್ಯ ದಿನಗಳಲ್ಲಿ ಪ್ರತೀ ದಿನ 5-7 ಕೋಟಿ ರೂ. ವ್ಯವಹಾರ ನಡೆಯುತ್ತಿದ್ದ ಮಂಗಳೂರಿನ ಮೀನುಗಾರಿಕೆ ಕ್ಷೇತ್ರದಲ್ಲಿ ಬಂದ್‌ನಿಂದಾಗಿ 5 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಹೇಳಿದ್ದಾರೆ.
Related Articles
Advertisement
ವಾಹನಗಳ ಸಂಚಾರಕ್ಕೆ ಅಡಚಣೆಬೃಹತ್ ಪ್ರತಿಭಟನೆಯ ಸಂದರ್ಭ ಬದಲಿ ಮಾರ್ಗಗಳಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾಗದಂತೆ ಟ್ರಕ್ ಇತ್ಯಾದಿ ಘನ ವಾಹನಗಳನ್ನು ಬಹು ದೂರದಲ್ಲಿಯೇ ತಡೆದು ನಿಲ್ಲಿಸಲಾಗಿತ್ತು. ಲಾರಿ, ಟ್ಯಾಂಕರ್ ಮತ್ತಿತರ ಘನ ವಾಹನಗಳನ್ನು ಪಾಂಗಾಳ, ಕಾಪು, ಮೂಳೂರು, ಸಾಸ್ತಾನ ಭಾಗದಲ್ಲಿ ನಿಲ್ಲಿಸಲಾಗಿದ್ದು, ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.