Advertisement
ಮಾರ್ಚ್ ಆರಂಭದಿಂದಲೇ ಕರಾವಳಿಯಲ್ಲಿ ಬಿಸಿಲ ಝಳ ಹೆಚ್ಚಾಗಿದ್ದು, ಗ್ರಾಮಾಂತರದಲ್ಲೂ ಕಂಗೆಡುವ ಪರಿಸ್ಥಿತಿ ಇದೆ. ಕೆರೆ, ಬಾವಿ, ಬೋರ್‌ವೆಲ್‌ಗಳಲ್ಲಿ ನೀರು ತಳ ತಲುಪುತ್ತಿದೆ. ಇರುವ ಬೆಳೆಗಳನ್ನು ಉಳಿಸಿಕೊಳ್ಳುವುದು ಹೇಗೆಂಬ ಆತಂಕ ಒಂದೆಡೆಯಾದರೆ, ಮುಂದಿನ ಹಂತದ ಭತ್ತದ ಬೆಳೆಗೆ ತಯಾರಿ ಹೇಗೆಂಬ ಚಿಂತೆ ಇನ್ನೊಂದೆಡೆ.
Related Articles
Advertisement
ಕೊಣಾಜೆಯ ಕೃಷಿಕ ಶಿವಾನಂದ “ಉದಯವಾಣಿ’ ಜತೆ ಮಾತನಾಡಿ, ಪ್ರತೀ ವರ್ಷ ಮೇ ಮೂರನೇ ವಾರದಿಂದ ಭತ್ತ ಬೆಳೆಗೆ ಪೂರ್ವಭಾವಿ ಚಟುವಟಿಕೆ ಆರಂಭಿಸುತ್ತೇವೆ. ಆಗ ಮಳೆ ಬಂದರೆ ಗದ್ದೆ ಹದಮಾಡಲು ಅನುಕೂಲವಾಗುತ್ತದೆ. ಆದರೆ ಕಳೆದ ವರ್ಷ ಬೇಸಗೆ ಮಳೆ ಸ್ವಲ್ಪ ಮಟ್ಟಿಗೆ ಸುರಿದಿತ್ತು. ಆದರೆ ಮುಂಗಾರು ತಡವಾದ್ದರಿಂದ ಆರಂಭಿಕ ಸಿದ್ಧತೆ ಮಾಡಿದ್ದರೂ ನಾಟಿ ಮಾಡಿದ್ದು ಜುಲೈಯಲ್ಲಿ ಎಂದರು.
ಮಳೆ ನಿರೀಕ್ಷೆಯಲ್ಲಿ…
ಕಳೆದ ಬಾರಿ ತಡವಾಗಿದ್ದರಿಂದ ಈ ಬಾರಿ ನಿರೀಕ್ಷಿತ ಅವಧಿಯಲ್ಲೇ ಮಳೆ ಆರಂಭವಾಗುವ ಸಾಧ್ಯತೆಯಿದೆ ಎಂಬ ಆಶಾಭಾವವನ್ನು ರೈತರು ಹೊಂದಿದ್ದಾರೆ. ಬೇಗ ಮಳೆ ಸರಿಯ ದಿದ್ದರೆ ಬೇಸಾಯ / ಕಟಾವು ತಡವಾಗುತ್ತದೆ. ಎರಡು ಬೆಳೆ ತೆಗೆಯುವವರಿಗೆ ಇದರಿಂದ ಸಮಸ್ಯೆಯಾಗುತ್ತದೆ. ಕಟಾವಿನ ವೇಳೆಯಲ್ಲಿ ಹಿಂಗಾರು ಮಳೆ ಸುರಿದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವಂತಾಗುತ್ತದೆ.
ಕರಾವಳಿಯಲ್ಲಿ ಈ ಬಾರಿ ಬಿಸಿಲ ಬೇಗೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮಳೆ ನಿರೀಕ್ಷೆಯೂ ಇದೆ. ಕರಾವಳಿ ಭಾಗದಲ್ಲಿ ಬೇಸಗೆ- ಪೂರ್ವ ಮುಂಗಾರು ಮಳೆ ವಾಡಿಕೆಯಷ್ಟು ಅಥವಾ ವಾಡಿಕೆಗಿಂತ ಕಡಿಮೆ ಸುರಿಯುವ ಸಾಧ್ಯತೆಯಿದೆ. – ಪ್ರಸಾದ್ ಎ. ಹವಾಮಾನ ಇಲಾಖೆ ವಿಜ್ಞಾನಿ
ಭರತ್ ಶೆಟ್ಟಿಗಾರ್