Advertisement

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

02:51 PM Nov 26, 2024 | Team Udayavani |

ಮಹಾನಗರ: ನಗರದ ರಸ್ತೆಗಳ ಬದಿ ವಾಹನಗಳ ಪಾರ್ಕಿಂಗ್‌ನ್ನು ವ್ಯವಸ್ಥಿತಗೊಳಿಸುವ ಪ್ರಯತ್ನವಾಗಿ ಸಂಚಾರಿ ಪೊಲೀಸರು ಜಾರಿಗೆ ತಂದಿರುವ ‘ಸಮ-ಬೆಸ ಪಾರ್ಕಿಂಗ್‌ ನಿಯಮ’ ಕೆಲವೆಡೆ ಪಾಲನೆಯಾಗುತ್ತಿಲ್ಲ.

Advertisement

ಪಿ.ಎಂ. ರಾವ್‌ ರಸ್ತೆ, ಡೊಂಗರಕೇರಿ ಕೆನರಾ ಶಾಲಾ ರಸ್ತೆ ಮೊದಲಾದೆಡೆ ಈ ನಿಯಮ ಜಾರಿಗೆ ಬಂದಿದೆ. ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಕೆ.ಎಸ್‌.ರಾವ್‌ ರಸ್ತೆ ಮತ್ತು ಗಣಪತಿ ಹೈಸ್ಕೂಲ್‌ ರಸ್ತೆಗಳನ್ನು ಸಂಪರ್ಕಿಸುವ ಪಿ.ಎಂ.ರಾವ್‌ ರಸ್ತೆಯಲ್ಲಿ ವರ್ಷದ ಹಿಂದೆಯೇ ಸಮ-ಬೆಸ ನಿಯಮ ಜಾರಿಗೆ ತರಲಾಗಿತ್ತು. ಇತ್ತೀಚಿನವರೆಗೂ ನಿಯಮ ಸಮರ್ಪಕವಾಗಿ ಪಾಲನೆಯಾಗುತ್ತಿತ್ತು. ಅಂಗಡಿ ಮಾಲಕರು ಕೂಡ ಸಹಕರಿಸಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಮತ್ತೆ ಈ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಪೊಲೀಸರ ಸೂಚನೆಯನ್ನು ಲೆಕ್ಕಿಸದೆ ಕೆಲವರು ಎರಡು ಬದಿಗಳಲ್ಲಿಯೂ ವಾಹನ ಪಾರ್ಕಿಂಗ್‌ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಸೂಚನೆ ಪಾಲಿಸದೆ ಸಮಸ್ಯೆ
ವಿಸ್ತರಣೆಗೊಂಡು ಅಭಿವೃದ್ಧಿಯಾಗಿರುವ ರಸ್ತೆಗಳ ಎರಡು ಬದಿಗಳಲ್ಲಿಯೂ ವಾಹನ ನಿಲುಗಡೆ ಮಾಡುವುದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗುವುದನ್ನು ತಪ್ಪಿಸಲು ಸಮ-ಬೆಸ ನಿಯಮ ರೂಪಿಸಲಾಗಿದೆ. ವಾರದಲ್ಲಿ ಒಂದು ದಿನ ರಸ್ತೆಯ ಒಂದು ಬದಿಯಲ್ಲಿ ಹಾಗೂ ಮತ್ತೂಂದು ದಿನ ಮತ್ತೂಂದು ಬದಿಯಲ್ಲಿ ಮಾತ್ರ ವಾಹನಗಳನ್ನು ಪಾರ್ಕಿಂಗ್‌ ಮಾಡಬೇಕು ಎಂಬುದೇ ಈ ನಿಯಮ. ಇದನ್ನು ಸೂಚಿಸುವ ಬೋರ್ಡ್‌ಗಳನ್ನು ಕೂಡ ಪೊಲೀಸರು ಅಲ್ಲಲ್ಲಿ ಅಳವಡಿಸಿದ್ದಾರೆ. ಆದರೆ ಕೆಲವು ಚಾಲಕರು, ಸವಾರರು ಸೂಚನೆಯನ್ನು ಪಾಲಿಸದೆ ಸಮಸ್ಯೆಯಾಗುತ್ತಿದ್ದು ಇಂತಹ ಚಾಲಕರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next