Advertisement

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

12:56 AM Jan 10, 2025 | Team Udayavani |

ಮಂಗಳೂರು: ಗೋವಾದಿಂದ ಮಂಗಳೂರು ಹಾಗೂ ಕೇರಳಕ್ಕೆ ಮಾದಕ ವಸ್ತು ಪೂರೈಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, 738 ಗ್ರಾಂ ತೂಕದ 73 ಲಕ್ಷ ರೂ. ಮೌಲ್ಯದ “ಹೈಡ್ರೋ ವೀಡ್‌ ಗಾಂಜಾ’ವನ್ನು ಕಾರು ಸಹಿತ ವಶಪಡಿಸಿಕೊಂಡಿದ್ದಾರೆ.

Advertisement

ಕೇರಳ ಕೋಝಿಕ್ಕೋಡ್‌ನ‌ ಕಂದಲಾಡ್‌ ಓರಂಗ್‌ಕುನ್ನು ನಿವಾಸಿ ಕೋಯಾ ಎಂಬವರ ಪುತ್ರ ಶಮೀರ್‌ ಪಿ.ಕೆ.(42) ಬಂಧಿತ.
ಈತ ಹೈಡ್ರೋವೀಡ್‌ ಗಾಂಜಾವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದು, ಮೂಲ್ಕಿ ಬಪ್ಪನಾಡು ರಾಷ್ಟ್ರೀಯ ಹೆದ್ದಾರಿ ಬಳಿ ಆರೋಪಿಯ ಕಾರನ್ನು ತಡೆದು ಆತನನ್ನು ಬಂಧಿಸಿದ್ದಾರೆ.

ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈಡ್ರೋವೀಡ್‌ ಗಾಂಜಾ ಎಂದರೆ…
ಸಾಮಾನ್ಯ ಗಾಂಜಾವನ್ನು ನೆಲದಲ್ಲಿ ಬೆಳೆಯುವುದಾದರೆ ಹೈಡ್ರೋ ವೀಡ್‌ ಗಾಂಜಾವನ್ನು ಮಣ್ಣಿನ ಸಹಾಯವಿಲ್ಲದೆ ಬೆಳೆಯಲಾಗುತ್ತದೆ. ಇತರ ಕೆಲವು ಸೊಪ್ಪು ತರಕಾರಿಗಳನ್ನು ಹೈಡ್ರೋಪೋನಿಕ್ಸ್‌ ವಿಧಾನದಲ್ಲಿ ನೀರು ಹಾಗೂ ಜಲ ರಸಗೊಬ್ಬರ ಬಳಸಿ ಬೆಳೆಸುವಂತೆ ಗಾಂಜಾವನ್ನೂ ಬೆಳೆಸುತ್ತಾರೆ. ಇದನ್ನು ಬಳಸುವವರ ಮೇಲೆಯೂ ಪರಿಣಾಮ ಹೆಚ್ಚು, ಇದರಿಂದ ಸಿಗುವ ಕಿಕ್‌ ಕೂಡ ಜಾಸ್ತಿ. ಹಾಗಾಗಿ ಬೇಡಿಕೆ ಹಾಗೂ ದರವೂ ಹೆಚ್ಚು ಎಂದು ತಿಳಿದುಬಂದಿದೆ. ಇದನ್ನು ಭಾರತದಲ್ಲಿ ಬೆಳೆಯುವುದು ಕಡಿಮೆ, ಹೆಚ್ಚಾಗಿ ಥಾçಲ್ಯಾಂಡ್‌ನಿಂದ ಆಮದಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next