Advertisement
ನಂತೂರು ಜಂಕ್ಷನ್ನಲ್ಲಿ 90 ವಾಹನಗಳ ತಪಾಸಣೆ ನಡೆಸಿ 3 ಪ್ರಕರಣ, ಕೊಟ್ಟಾರಚೌಕಿ, ಕುಂಟಿಕಾನ ಜಂಕ್ಷನ್ನಲ್ಲಿ 98 ವಾಹನಗಳ ತಪಾಸಣೆ ನಡೆಸಿ 5 ಪ್ರಕರಣ, ಬೈಕಂಪಾಡಿ ಜಂಕ್ಷನ್, ಕೂಳೂರು ಅಯ್ಯಪ್ಪ ಗುಡಿ, ರೆಡ್ರಾಕ್ ಮುಕ್ಕದಲ್ಲಿ 230 ವಾಹನಗಳ ತಪಾಸಣೆ ನಡೆಸಿ 11 ಪ್ರಕರಣ, ಪಂಪ್ವೆಲ್ ಜಂಕ್ಷನ್, ಪಡೀಲ್ ಜಂಕ್ಷನ್ನಲ್ಲಿ 45 ವಾಹನಗಳ ತಪಾಸಣೆ ನಡೆಸಿ 6 ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಸ ವರ್ಷಾಚರಣೆಯ ಬಂದೋಬಸ್ತ್, ವಾಹನ ತಪಾಸಣೆಯಲ್ಲಿ ತೊಡಗಿದ್ದ ಪೊಲೀಸರು ಕದ್ರಿಯಲ್ಲಿ ಕೇಕ್ ಕತ್ತರಿಸಿದರು. ಅನಂತರ ಅದನ್ನು ಪೊಲೀಸ್ ಸಿಬಂದಿ, ವಾಹನ ಚಾಲಕರಿಗೆ ಹಂಚಿ ಸಂಭ್ರಮಿಸಿದರು.