Advertisement

Canada; Halton Regional ಸಾರ್ವಜನಿಕ ಆರೋಗ್ಯ ಮುಖ್ಯಸ್ಥೆಯಾಗಿ ಡಾ. ದೀಪಿಕಾ ಲೋಬೋ

08:45 PM Feb 23, 2024 | Team Udayavani |

ಮಂಗಳೂರು: ಕೆನಡಾ ಹಾಲ್ಟನ್ ರೀಜನಲ್ ಕೌನ್ಸಿಲ್ ಸಾರ್ವಜನಿಕ ಆರೋಗ್ಯದ ನೂತನ ಮುಖ್ಯಸ್ಥರನ್ನಾಗಿ ಮಂಗಳೂರು ಮೂಲದ ಡಾ. ದೀಪಿಕಾ ಲೋಬೋ ಅವರನ್ನು ನೇಮಿಸಿದೆ.

Advertisement

ಡಾ. ದೀಪಿಕಾ ಲೋಬೋ ಪ್ರದೇಶಕ್ಕೆ ಆರೋಗ್ಯ ಆಯುಕ್ತರಾಗಿ ಮತ್ತು ಆರೋಗ್ಯ ವೈದ್ಯಕೀಯ ಅಧಿಕಾರಿ (MOH) ಪಾತ್ರ ವಹಿಸಲಿದ್ದಾರೆ. ಸಾರ್ವಜನಿಕ ಆರೋಗ್ಯ ಮತ್ತು ಅರೆವೈದ್ಯಕೀಯ ಸೇವೆಗಳನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.  100 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚಿನ ಬಜೆಟ್ ಅನ್ನು ನಿರ್ವಹಿಸಲಿದ್ದಾರೆ.

ಡಾ. ದೀಪಿಕಾ ಅವರು 2019 ರಿಂದ ಹಾಲ್ಟನ್ ಪ್ರದೇಶದಲ್ಲಿದ್ದಾರೆ, ಆರಂಭದಲ್ಲಿ ಆರೋಗ್ಯ ಸಹಾಯಕ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಾಯಕತ್ವದ ಸಾಮರ್ಥ್ಯಗಳನ್ನು ಗುರುತಿಸಿ 2023 ಸೆಪ್ಟೆಂಬರ್ ನಲ್ಲಿ ಆರೋಗ್ಯ ಆಯುಕ್ತರಾಗಿ ಜವಾಬ್ದಾರಿ ನೀಡಲಾಗಿತ್ತು.

ಡಾ. ದೀಪಿಕಾ ಮೆಕ್‌ಮಾಸ್ಟರ್ ವಿಶ್ವವಿದ್ಯಾನಿಲಯದ ಡಿಗ್ರೂಟ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ತಡೆಗಟ್ಟುವ ಔಷಧದಲ್ಲಿ ತನ್ನ ರೆಸಿಡೆನ್ಸಿಯನ್ನು ಪೂರ್ಣಗೊಳಿಸಿದ್ದು, ಕೆನಡಾದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಮತ್ತು ಸರ್ಜನ್ಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ.

ಮಂಗಳೂರಿನ ಮಾರ್ಜಿಲ್‌ನ ಸೇಂಟ್ ಮೇರಿಸ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ, ನಂತರ ಮಣಿಪಾಲ ವಿಶ್ವವಿದ್ಯಾನಿಲಯದ ಕಸ್ತೂರ್ಬಾ ಮೆಡಿಕಲ್ ಕಾಲೇಜ್‌ನಲ್ಲಿ ವೈದ್ಯಕೀಯ ಪದವಿ, ಮೆಕ್‌ಮಾಸ್ಟರ್‌ನಿಂದ ಸಾರ್ವಜನಿಕ ಆರೋಗ್ಯ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.

Advertisement

2013 ರಲ್ಲಿ, ಡಾ. ದೀಪಿಕಾ ಅವರು ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯದ ಡಿಗ್ರೂಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಆರೋಗ್ಯ ಸೇವೆಗಳ ನಿರ್ವಹಣೆಯಲ್ಲಿ ತಮ್ಮ MBA ಅವಧಿಯಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ಪ್ರತಿಷ್ಠಿತ ಅಲನ್ ಜೆ ಗ್ರೀವ್ ಚಿನ್ನದ ಪದಕವನ್ನು ಪಡೆದ ಸಾಧನೆ ಮಾಡಿದ್ದಾರೆ.

ಡೆನಿಸ್ ಮತ್ತು ಡೊರೊಥಿ ರೋಡ್ರಿಗಸ್ ಅವರ ಪುತ್ರಿಯಾಗಿದ್ದು ಆಕೆಗೆ ಒಡಹುಟ್ಟಿದ ದಿಲ್ರಾಜ್ ಮತ್ತು ದೀಕ್ಷಿತ್ ಎಂಬ ಸಹೋದರರಿದ್ದಾರೆ. . ರವಿಕಿರಣ್ ಲೋಬೋ ಅವರನ್ನು ವಿವಾಹವಾಗುರುವ ದೀಪಿಕಾ ರೇಗನ್ ಮತ್ತು ರೋಹನ್ ಲೋಬೋ ಎಂಬ ಇಬ್ಬರು ಗಂಡುಮಕ್ಕಳ ತಾಯಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next