Advertisement

ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ಇನ್ನೂರಕ್ಕೂ ಅಧಿಕ ಬೋಟುಗಳು ಲಂಗರು

07:02 PM Oct 25, 2019 | Team Udayavani |

ಮಂಗಳೂರು: ತೀವ್ರ ಗಾಳಿ ಮಳೆಯ ಕಾರಣ ಭಾರೀ ಸಂಖ್ಯೆಯ ಮೀನುಗಾರಿಕಾ ಬೋಟುಗಳು ಲಂಗರು ಹಾಕಿವೆ. ಬಂದರು ಪ್ರವೇಶಿಸುವ ಸಮುದ್ರ ಬಾಗಿಲಿನಲ್ಲಿಯೇ ಸುಮಾರು 200 ಕ್ಕೂ ಅಧಿಕ ಬೋಟುಗಳು ನಿಂತಿದ್ದು, ಇದರಿಂದಾಗಿ ಕೋಸ್ಟ್ ಗಾರ್ಡ್ ರಕ್ಷಣಾ ನೌಕೆಗೆ ಸಮುದ್ರದಲ್ಲಿ ಪರಿಹಾರ ಮತ್ತು ಹುಡುಕಾಟ ನಡೆಸಲು ಸಮುದ್ರಕ್ಕೆ ತೆರಳಲು ಅಡಚಣೆಯಾದ ದೃಶ್ಯ ಕಂಡು ಬಂದಿದೆ.

Advertisement

ಅರಬ್ಬಿ ಸಮುದ್ರ ಮತ್ತು ಲಕ್ಷ ದ್ವೀಪದಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವದ ಹಿನ್ನಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಗುರವಾರದಂದು ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಮುಸ್ಸೂಚನೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next