ಮಂಗಳೂರು: ನೆರೆಪೀಡಿತ ಎಲ್ಲಾ ರಾಜ್ಯಗಳಿಗೂ ಪರಿಹಾರ ವ್ಯವಸ್ಥೆಯನ್ನ ಮಾಡಲಾಗುತ್ತಿದೆ. ಈ ಬಗ್ಗೆ ಗೊಂದಲ ಬೇಡ. ರಾಜ್ಯ ಸರಕಾರದಲ್ಲಿ ನೆರೆಪೀಡಿತರ ಜತೆ ಕೇಂದ್ರ ಸರಕಾರ ಸದಾ ಇದೆ. ಸಂಕಷ್ಟದಲ್ಲಿದ್ದವರನ್ನ ಸಂರಕ್ಷಣೆ ಮಾಡುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಇದೆ. ಅದನ್ನ ಮಾಡೇ ಮಾಡುತ್ತೇವೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಮುಗಿಸುವಲ್ಲಿ ಯಶಸ್ವಿ ಆಗಿದ್ದಾರೆ. ಅವರ ಕೊನೆಯ ಆಸೆ ಏನೆಂಬುದು ಗೊತ್ತಿಲ್ಲ ಎಂದರು.
ಪ್ರಧಾನಿ ಮೋದಿಯವರು ಹೌಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ದೇಶದ ಹಿರಿಮೆ ಜಗತ್ತಿನಾದ್ಯಂತ ಪಸರಿಸಲಿದೆ. ಅವರು ಅಮೇರಿಕಾದ ಅಧ್ಯಕ್ಷರ ಜತೆ ವೇದಿಕೆ ಹಂಚುತ್ತಾರೆ. ರಾಜತಾಂತ್ರಿಕವಾಗಿ ಅಲ್ಲ, ಅನಿವಾಸಿ ಭಾರತೀಯರಾದ ಇಂಜಿನಿಯರ್, ಡಾಕ್ಟರ್, ಉದ್ಯಮಿಗಳ ಜತೆ ತಮ್ಮ ಹಲವಾರು ವಿಷಯಗಳ ಬಗ್ಗೆ ಜಾಗತೀಕ ಮಟ್ಟದಲ್ಲಿ ಚರ್ಚೆ ನಡೆಸಲಿದ್ದಾರೆ. ನಮ್ಮ ದೇಶದ ಹಿರಿಮೆ ಇತರ ದೇಶಗಳು ಕೊಂಡಾಡುವಂತಾರಾಗುವಲ್ಲಿ ಈ ಕಾರ್ಯಕ್ರಮ ಪ್ರಶಂಶನೀಯ ಎಂಬುದಾಗಿ ತಿಳಿಸಿದರು.
ರಸಗೊಬ್ಬರ ಉತ್ದಾದನೆಯ ಕಾರ್ಖಾನೆಗಳನ್ನ ಮತ್ತೆ ಪುನರುಜ್ಜೀವನಗೊಳಿಸಲಾಗುವುದು. ಈಗಾಗಲೇ 2002,2003-4 ರಲ್ಲಿ 4 ಬೃಹತ್ ಪ್ಯಾಕ್ಟರಿ ಘಟಕಗಳು ಮುಚ್ಚುಗಡೆಯಾಗಿದೆ. ನರೇಂದ್ರ ಮೋದಿಯವರ ಮುತುರ್ವಜಿಯಿಂದ ಸುಮಾರು 14 ಸಾವಿರ ಕೋಟಿಗಳ ಮೀಸಲಿರಿಸಿ ಕಾರ್ಖಾನೆಗಳ ಘಟಕಗಳನ್ನು ಮತ್ತೆ ಆರಂಭಿಸಿ ರೈತರಿಗೆ ಬೇಕಾದ ರಸಗೊಬ್ಬರಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಜನೌಷಧಿ ಕೇಂದ್ರಗಳನ್ನ ಜನರಿಗೆ ಮತ್ತೆ ಕಡಮೆ ಬೆಲೆಯಲ್ಲಿ ತಲುಪಿಸುವ ಕಾರ್ಯ ಯಶಸ್ವಿಯಾಗಲಿದೆ. ಯಾವುದೇ ಕುಂದುಕೊರತೆ ಕೂಡಾ ಇಲ್ಲ ಎಂದು ಹೇಳಿದರು.