Advertisement

Mangaluru: ಸ್ವರಾನಂದ್‌ ಪ್ರತಿಷ್ಠಾನದ ಅರ್ಥಪೂರ್ಣ ಬೈಠಕ್‌

01:58 AM Aug 25, 2024 | Team Udayavani |

ಸ್ವರಾನಂದ್‌ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಎರಡು ಗಾಯನ ಕಛೇರಿಗಳು ಇತ್ತೀಚೆಗೆ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲ್‌ನ ಸಭಾಭವನದಲ್ಲಿ ನಡೆಯಿತು.

Advertisement

ಮೊದಲಿಗೆ ಮಂಗಳೂರಿನ ಯುವ ಗಾಯಕರಾದ ದಯಾಕರ್‌ ಭಟ್‌ ಮಾರೂ ಬಿಹಾಗ್‌ ರಾಗದಲ್ಲಿ ವಿಲಂಬಿತ್‌ ತಿಲವಾಡ ದ್ರುತ್‌ ತೀನ್‌ ತಾಳದ ಬಂಧಿಶ್‌ಗಳನ್ನು ಹಾಡಿ, ಒಂದು ಸುಂದರ ರಾಗ್‌ ಮಾಲದೊಂದಿಗೆ ತನ್ನ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಇವರಿಗೆ ದೀಪಕ್‌ ನಾಯಕ್‌ ಹರಿಖಂಡಿಗೆ ಹಾಗೂ ವಿಶ್ವಜಿತ್‌ ಕಿಣಿ ಇವರು ತಬಲಾ ಹಾಗೂ ಹಾರ್ಮೋನಿಯಂ ಸಾಥ್‌ ನೀಡಿದರು. ತಂಬೂರದಲ್ಲಿ ಸ್ಮತಿ ಹಾಗೂ ನರಸಿಂಹ ಪೈ ಸಹಕರಿಸಿದರು.

ಎರಡನೆಯ ಬೈಠಕ್‌ನಲ್ಲಿ ಪುಣೆಯ ಡಾ| ರುಚಿರಾ ಕೇದಾರ್‌ ಇವರು ಸೂರ್‌ ಮಲ್ಹಾರ್‌ ರಾಗದಲ್ಲಿ ತೀನ್‌ ತಾಳದ ಬಂಧಿಶ್‌ಗಳನ್ನು ಪ್ರಸ್ತುತ ಪಡಿಸಿ, ಠುಮ್ರಿ ದಾದ್ರಗಳನ್ನು ಹಾಡಿ ಸಂಗೀತ ವಿದ್ಯಾರ್ಥಿಗಳಿಗೆ ಅವುಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು. ವಿಘ್ನೇ ಶ್‌ ಕಾಮತ್‌ ಕೋಟೇಶ್ವರ ಹಾಗೂ ಪ್ರಸಾದ್‌ ಕಾಮತ್‌ ಉಡುಪಿ, ತಬಲಾ ಹಾಗೂ ಸಂವಾದಿನಿಗಳಲ್ಲಿ ಸಮರ್ಥ ಸಾಥ್‌ ನೀಡಿದರು. ತಂಬೂರದಲ್ಲಿ ನಿತ್ಯಾ ಶಿಖಾರಿಪುರ್‌ ಹಾಗೂ ಮಂಗಳೂರಿನ ಮೇಘಾ ಸಹಕರಿಸಿದರು.

- ಭಾರವಿ ದೇರಾಜೆ

Advertisement

Udayavani is now on Telegram. Click here to join our channel and stay updated with the latest news.

Next