Advertisement

Mangaluru ಗಾಂಜಾ ಸೇವನೆ: ಇಬ್ಬರ ಬಂಧನ

12:40 AM Mar 04, 2024 | Team Udayavani |

ಮಂಗಳೂರು: ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಸೇವಿಸಿದ ಆರೋಪದಲ್ಲಿ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

Advertisement

ಉರ್ವ ಪೊಲೀಸರು ಮಾ.1ರಂದು ಮಧ್ಯರಾತ್ರಿ ವೇಳೆ ಬಿಜೈ ಕಾಪಿಕಾಡ್‌ ಮತ್ತು ಹ್ಯಾಟ್‌ಹಿಲ್‌ ಬಳಿ ರೌಂಡ್ಸ್‌ನಲ್ಲಿದ್ದಾಗ ಪೊಲೀಸ್‌ ವಾಹನವನ್ನು ನೋಡಿ ಕೈಯಲ್ಲಿದ್ದ ಸಿಗರೇಟ್‌ ಬಿಸಾಡಿದ ಕೇರಳದ ಮುಹಮ್ಮದ್‌ ಫಾಜಿಲ್‌ ಕೆ.(24) ಮತ್ತು ಕಾಸರಗೋಡಿನ ಸಬದ್‌ ಎಸ್‌.(25)ನನ್ನು ವಶಕ್ಕೆ ಪಡೆದು ವಿಚಾ ರಿಸಿದಾಗ ಅವರ ಬಾಯಿ ಯಿಂದ ಗಾಂಜಾ ಸೇವಿಸಿದ ವಾಸನೆ ಬರುತ್ತಿತ್ತು. ವೈದ್ಯಕೀಯ ತಪಾಸಣೆಗೆ ಒಳ ಪಡಿಸಿ ದಾಗ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

 

Advertisement

Udayavani is now on Telegram. Click here to join our channel and stay updated with the latest news.

Next