Advertisement

ಮಡಿಕೇರಿ -ಮಂಗಳೂರು ರಸ್ತೆಯಲ್ಲಿ ಬೃಹತ್‌ ಗುಂಡಿ

11:07 AM Jul 30, 2018 | |

ಮಡಿಕೇರಿ: ಒಂದು ತಿಂಗಳ ಭಾರೀ ಮಳೆಯಿಂದಾಗಿ ಕೆಲವೆಡೆ ಬಿರುಕು, ಕೆಲವೆಡೆ ಕುಸಿತ ಕಂಡಿದ್ದ ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಮಡಿಕೇರಿ ಸಮೀಪ ಕಾಟಕೇರಿಯಲ್ಲಿ ಬೃಹತ್‌ ಗುಂಡಿ ಕಾಣಿಸಿಕೊಂಡಿದ್ದು, ವಾಹನ ಗಳ ಸಂಚಾರಕ್ಕೆ ಅಡಚಣೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮಧ್ಯ ಭಾಗದಲ್ಲಿಯೇ ಸುಮಾರು ಮೂರು ಅಡಿ ಯಷ್ಟು ಆಳಕ್ಕೆ ವೃತ್ತಾಕಾರವಾಗಿ ರಸ್ತೆ ಕುಸಿದಿದೆ. ರವಿವಾರ ತಡರಾತ್ರಿ ಗುಂಡಿ ಬಿದ್ದಿರಬಹುದೆಂದು ಅಧಿಕಾರಿಗಳು ತಿಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ರಸ್ತೆ ನಡುವೆಯೇ ಬೃಹತ್‌ ಗುಂಡಿ ಆಗಿರುವುದರಿಂದ ಭಾರೀ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

Advertisement

ಪೊಲೀಸ್‌ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುರಸ್ತಿಯ ಕುರಿತು ಭರವಸೆ ನೀಡಿದ್ದಾರೆ. ಒಂದು ವಾರದಿಂದ ಮಳೆ ಬಿಡುವು ನೀಡಿದ್ದರೂ ಒಂದು ತಿಂಗಳ ಅವಧಿಯಲ್ಲಿ ಸುರಿದ ಭಾರೀ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಅಲ್ಲಲ್ಲಿ ಬರೆ, ಮನೆ, ರಸ್ತೆಗಳು ಕುಸಿಯುತ್ತಿರುವ ಘಟನೆಗಳು ಮುಂದುವರಿಯುತ್ತಲೇ ಇವೆ. ಮಡಿಕೇರಿ- ಮಂಗಳೂರು ಹೆದ್ದಾರಿಯ ಒಂದು ಭಾಗ ಕಳೆದ ವಾರವಷ್ಟೇ ಕುಸಿತ ಕಂಡಿತ್ತು. ಈಗ ಮಧ್ಯ ಭಾಗದಲ್ಲೇ ಕುಸಿತ ಉಂಟಾಗಿ ಅಪಾಯದ ಮನ್ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next