ಮಹಾನಗರ: ನಗರದಲ್ಲಿ ದಿನದಿಂದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರಸ್ತುತ ಪ್ರಮುಖ ಪ್ರದೇಶಗಳಲ್ಲಿ ವೃತ್ತಗಳು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗು ತ್ತಿರುವುದರಿಂದ ಅವುಗಳನ್ನು ತೆರವುಗೊಳಿ ಸಬೇಕು ಎಂದು ಮಹಾನಗರ ಪಾಲಿಕೆಗೆ ಈಗಾಗಲೇ ಒತ್ತಡ ಬಂದಿದೆ. ಹಾಗಾಗಿ ಇದೀಗ ಲೇಡಿಹಿಲ್ ಸಮೀಪದ ವೃತ್ತವನ್ನು ಈಗಿರುವ ಜಾಗದಿಂದ 2-3 ಅಡಿ ಮುಂದಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.
Advertisement
ಲೇಡಿಹಿಲ್ ಶಾಲೆಯ ಪಕ್ಕದಲ್ಲಿರುವ ವೃತ್ತದಿಂದ ಮಣ್ಣಗುಡ್ಡೆ, ಉರ್ವ ಮಾರುಕಟ್ಟೆ, ಚಿಲಿಂಬಿ, ಲಾಲ್ಬಾಗ್‌ಗೆ ರಸ್ತೆ ಸಂಪರ್ಕ ಕಲ್ಪಿಸುತ್ತದೆ.
Related Articles
ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬ ನಿಟ್ಟಿನಲ್ಲಿ ನಗರದಲ್ಲಿ ವೃತ್ತಗಳನ್ನು ತೆರವುಗೊಳಿಸಿ ಮತ್ತು ವೃತ್ತಗಳನ್ನು ಕಿರಿದು ಮಾಡಿದ್ದು ಇದೇ ಮೊದಲಲ್ಲ. ನಂತೂರು ವೃತ್ತದ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಇರಾದೆಯಿಂದ ವೃತ್ತದ ಗಾತ್ರವನ್ನು ಈ ಹಿಂದಿಗಿಂತ ಶೇ.50ರಷ್ಟು ಕಡಿಮೆ ಮಾಡಲಾಗಿದೆ.
Advertisement
ಸುಮಾರು 11 ಮೀಟರ್ ನಷ್ಟು ಸುತ್ತಳತೆಯಿದ್ದ ನಂತೂರು ವೃತ್ತವನ್ನು 5.5 ಮೀಟರ್‌ಗೆ ಕಿರಿದು ಮಾಡಲಾಗಿದೆ. ಈ ಹಿಂದೆ ಇದ್ದಂತಹ ಬಂಟ್ಸ್‌ಹಾಸ್ಟೆಲ್, ಸೈಂಟ್ ಆ್ಯಗ್ನೆಸ್ ಕಾಲೇಜು ವೃತ್ತ, ಬೆಂದೂರು, ಕಂಕನಾಡಿ, ಕದ್ರಿ ಶಿವಬಾಗ್ ವೃತ್ತಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇದರಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.
ಕೆಲವು ದಿನಗಳಲ್ಲೇ ಮಾರ್ಕಿಂಗ್ ಕೆಲಸ ವಾಹನ ಸಂಚಾರಕ್ಕೆ ಅನುಕೂಲ ಮಾಡುವ ದೃಷ್ಟಿಯಿಂದಾಗಿ ಲೇಡಿಹಿಲ್ ವೃತ್ತವನ್ನು ಸದ್ಯ ಕೆಡವಲಾಗಿದೆ. ಅಲ್ಲೇ ಸುಮಾರು ಮೂರು ಅಡಿ ಮುಂದೆ ರಸ್ತೆ ಮಧ್ಯ ಭಾಗದಲ್ಲಿ ನೂತನ ವೃತ್ತ ನಿರ್ಮಾಣವಾಗಲಿದೆ. ಇನ್ನು ಕೆಲವು ದಿನಗಳಲ್ಲಿ ನೂತನ ವೃತ್ತದ ಮಾರ್ಕಿಂಗ್ ಕಾರ್ಯ ನಡೆಯಲಿದೆ.
– ಲಿಂಗೇಗೌಡ,
ಪಾಲಿಕೆ ಕಾರ್ಯಪಾಲಕ ಅಭಿಯಂತರ