Advertisement
ಅವರು ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಕನಕ ಜಯಂತಿ ಪ್ರಯುಕ್ತ ಬುಧವಾರ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಕನಕ ತಣ್ತೀಚಿಂತನ ಮತ್ತು ಕನಕ ಗಂಗೋತ್ರಿ ಕಾರ್ಯಕ್ರಮದಲ್ಲಿ ‘ಭಕ್ತಿಪರಂಪರೆಯ ಲೋಕಯಾನ ಮತ್ತು ಕನಕದಾಸರು: ಸಮಕಾಲೀನ ಸಂವಾದ’ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
Related Articles
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿರು ಕನಕದಾಸ ಸಂಶೋಧನ ಕೇಂದ್ರವು ಹತ್ತು ಹಲವಾರು ಕಾರ್ಯಕ್ರಮಗಳೊಂದಿಗೆ ಕನಕನ ಚಿಂತನೆಗಳನ್ನು ಜನರಿಗೆ ತಲುಪಿಸುವ ಉತ್ತಮ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
Advertisement
ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ| ಈಶ್ವರ ಪಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನಕ ಚಿಂತನ ಕೃತಿಗಳ 2ನೇ ಆವೃತ್ತಿಯನ್ನು ಬಿಡುಗಡೆ ಗೊಳಿಸಲಾಯಿತು. 2017-18ನೇ ಸಾಲಿನ ಕನಕ ಪುರಸ್ಕಾರವನ್ನು ಸಾಧಕರಿಗೆ ನೀಡಿ ಗೌರವಿಸಲಾಯಿತು. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ| ಬಿ. ಶಿವರಾಮ ಶೆಟ್ಟಿ ಸ್ವಾಗತಿಸಿ, ಸಂಶೋಧನ ಸಹಾಯಕ ರಮೇಶ್ ಆರ್. ವಂದಿಸಿದರು. ಅರ್ಪಿತಾ ನಿರೂಪಿ ಸಿದರು. ಸಭೆ ಬಳಿಕ ಕನಕಗಂಗೋತ್ರಿ ಕೀರ್ತನ ಗಾಯನ ನಡೆಯಿತು.
ಕನಕನ ಚಿಂತನೆಗಳನ್ನು ಅಳವಡಿಸಿಕೊಳ್ಳಿಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ| ಪಿ.ಎಲ್.ಧರ್ಮ ಮಾತನಾಡಿ, ಕನಕನಲ್ಲಿ ನಾವು ಸಾಮಾಜಿಕ ಸಮಾನತೆ, ಪ್ರಜಾಪ್ರಭುತ್ವದ ನೆಲೆ ಹಾಗೂ ಬಹುತ್ವದ ಚಿಂತನೆಯನ್ನು ಕಾಣಲು ಸಾಧ್ಯವಿದೆ. ನಮ್ಮೊಳಗಿರುವ ಅಹಂ ಅನ್ನು ನಾವು ದೂರಗೊಳಿಸದಿದ್ದರೆ ಕನಕನ ಚಿಂತನೆಗಳನ್ನು ನಾವು ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.