Advertisement

ಮಂಗಳೂರು ಕಂಬಳ: ಶಾಸಕ ಭರತ್ ಶೆಟ್ಟಿಯವರ ಕೋಣಗಳಿಗೆ ಪ್ರಥಮ ಬಹುಮಾನ

04:47 PM Mar 27, 2022 | Team Udayavani |

ಮಂಗಳೂರು: ಹೊನಲು-ಬೆಳಕಿನ ಐದನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳವು ಬಂಗ್ರಕುಳೂರಿನಲ್ಲಿ ರವಿವಾರ ಮಧ್ಯಾಹ್ನ ಸಂಪನ್ನವಾಯಿತು. ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಅವರ ಕೋಣಗಳು ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಗೆದ್ದುಕೊಂಡವು.

Advertisement

ಕೂಟದಲ್ಲಿ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ ಮೂರು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಎಂಟು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 17 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 27 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 21 ಜೊತೆ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ 66 ಜೊತೆ ಕೋಣಗಳು ಭಾಗಿಯಾಗಿದ್ದವು.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಭರ್ಜರಿ ಜಯ; ಸೆಮಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್ ವನಿತೆಯರು

ಈ ಹಿಂದೆ ಹಲವಾರು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿಯವರ ಕೋಣಗಳನ್ನು ಮಂಗಳೂರು ಕಂಬಳದಲ್ಲಿ ಶಾಸಕ ಭರತ್ ಶೆಟ್ಟಿಯವರ ಹೆಸರಿನಲ್ಲಿ ಓಡಿಸಲಾಗಿತ್ತು. ಕಂಬಳ ಕರೆಯಲ್ಲಿದ್ದ ಶಾಸಕ ಭರತ್ ಶೆಟ್ಟಿ ವಿಜಯ ಕ್ಷಣವನ್ನು ಸಂಗಡಿಗರನ್ನು ತಬ್ಬಿ ಸಂಭ್ರಮಿಸಿದರು. ಕೋಣಗಳನ್ನು ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಓಡಿಸಿದರು.

Advertisement

ಮಂಗಳೂರು “ರಾಮ – ಲಕ್ಷ್ಮಣ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಕನೆಹಲಗೆ (ನೀರು ನೋಡಿ ಬಹುಮಾನ)

ಪ್ರಥಮ: ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ಬಾರ್ಕೂರು ಶಾಂತಾರಾಮ ಶೆಟ್ಟಿ

ಹಲಗೆ ಮೆಟ್ಟಿದವರು: ಮಂದಾರ್ತಿ ಶಿರೂರು ಭರತ್ ನಾಯ್ಕ್

ಅಡ್ಡ ಹಲಗೆ

ಪ್ರಥಮ: ವಾಲ್ಪಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ದಾನ

ಹಲಗೆ ಮೆಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ

ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ

ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಗ್ಗ ಹಿರಿಯ

ಪ್ರಥಮ: ಎಡ್ತರೆಗುತ್ತು ಡಾ.ವೈ ಭರತ್ ಶೆಟ್ಟಿ “ಎ”

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಪದವು ಕಾನಡ್ಕ ಫ್ಲೇವಿ ಡಿಸೋಜ “ಎ”

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ಹಗ್ಗ ಕಿರಿಯ

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್

ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ಗುರುಪುರ ಕಾರಮೊಗರಗುತ್ತು ಯಶ್ ಜಗದೀಶ್ ಆಳ್ವ

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಹಿರಿಯ

ಪ್ರಥಮ: ಬೋಳದಗುತ್ತು ಜಗದೀಶ್ ಶೆಟ್ಟಿ “ಎ”

ಓಡಿಸಿದವರು: ಮರೋಡಿ ಶ್ರೀಧರ್

ದ್ವಿತೀಯ: ಸಿದ್ಧಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ “ಎ”

ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ನೇಗಿಲು ಕಿರಿಯ

ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ

ಓಡಿಸಿದವರು: ಮರೋಡಿ ಶ್ರೀಧರ್

ದ್ವಿತೀಯ: ಪಡೀಲು ಕವತ್ತಾರುಗುತ್ತು ದಿನಕರ ಜಯರಾಮ್ ಶೆಟ್ಟಿ

ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್

Advertisement

Udayavani is now on Telegram. Click here to join our channel and stay updated with the latest news.

Next