Advertisement

Mangaluru: ಮನೆಯಿಂದ ಚಿನ್ನಾಭರಣ ಕಳವು

09:08 PM Sep 02, 2024 | Team Udayavani |

ಮಂಗಳೂರು: ಮನೆಯಿಂದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಯೆಯ್ನಾಡಿ ದಂಡಕೇರಿಯಲ್ಲಿ ನಡೆದಿದೆ.

Advertisement

ಮನೆಯಲ್ಲಿದ್ದ ಮಹಿಳೆ ತನ್ನ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ಆ. 25ರಂದು ಪದವಿನಂಗಡಿಗೆ ತೆರಳಿದ್ದರು. ಬಾಗಿಲಿನ ಬೀಗವನ್ನು ಹಾಕಿ ಕೀಯನ್ನು ಮನೆಯ ಹೊರಗಡೆ ಮೀಟರ್‌ ಬೋರ್ಡ್‌ ಮೇಲೆ ಇಟ್ಟಿದ್ದರು. ಆ. 28ರಂದು ಮನೆಗೆ ಬಂದು ನೋಡಿದಾಗ ಚಿನ್ನದ ರಿಂಗ್‌ಗಳು, ಬ್ರೇಸ್‌ಲೆಟ್‌ ಸೇರಿದಂತೆ ಅಂದಾಜು 1.40 ಲ.ರೂ. ಮೌಲ್ಯದ ಚಿನಾಭರಣ ಕಳವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next