Advertisement

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

10:48 AM Sep 21, 2024 | Team Udayavani |

ಮಂಗಳೂರು: ಸಂವಿಧಾನ ದಲ್ಲಿನ “ಜಾತ್ಯ ತೀತ’ ಪದವನ್ನು ತೆಗೆದು “ನಾಸ್ತಿಕ ಭಾರತ’ ಎಂದು ಬದಲಾ ಯಿಸ ಬೇಕು. ಜಾತಿ -ಧರ್ಮಗಳೇ ದೇಶಕ್ಕೆ ದೊಡ್ಡ ಕಂಟಕವಾಗಿದ್ದು, ಇವು ಗಳಿಂದಲೇ ದೇಶದ ಅಸ್ಮಿತೆ ನಾಶವಾಗಿದೆ ಎಂದು ಮಹಾತ್ಮ ಗಾಂಧೀಜಿಯವರ ಮರಿಮಗ ತುಷಾರ್‌ ಗಾಂಧಿ ಹೇಳಿದರು.

Advertisement

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಪುತ್ತೂರು ಸಹಯೋಗದಲ್ಲಿ ಶುಕ್ರವಾರ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾದ ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯ ಕ್ರಮದಲ್ಲಿ ಅವರು “ಇಂದಿನ ಯುವಜನತೆಗೆ ಗಾಂಧಿ ವಿಚಾರಧಾರೆಯ ಪ್ರಸ್ತುತತೆ’ ಬಗ್ಗೆ ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮದ ವೇಳೆ ಒಗ್ಗಟ್ಟಿನಿಂದ ಇದ್ದ ನಾವು, ಇಂದು ಜಾತಿ- ಧರ್ಮವನ್ನು ಅಪ್ಪಿರುವುದು ದೌರ್ಭಾಗ್ಯದ ಸಂಗತಿ. ಧರ್ಮ, ಜಾತಿ, ದ್ವೇಷದ ಮೂಲಕ ಜನರ ಒಗ್ಗಟ್ಟು ಮುರಿಯಲು ಯತ್ನಿಸುತ್ತಿರುವ ರಾಜ ಕೀಯ ವ್ಯವಸ್ಥೆಯ ವಿರುದ್ಧ ಹೋರಾ ಟದ ಧ್ವನಿ ಮೊಳಗಬೇಕು ಎಂದರು.

ದೇಶದಲ್ಲಿ ಮತದಾನ ಮೌಲ್ಯವೂ ಕುಸಿಯುತ್ತಿದ್ದು, ಯಾರಿಗೆ ಜನಪ್ರತಿನಿಧಿ ಯಾಗಲು ಅರ್ಹತೆ ಇಲ್ಲವೋ ಅಂಥವರು ಇಂದು ನಮ್ಮನ್ನು ಆಳುತ್ತಿ ದ್ದಾರೆ ಎಂದ ಅವರು, ಇಂದಿರಾ ಗಾಂ ಧಿಯವರೂ ಸರ್ವಾಧಿಕಾರಿ ಧೋರಣೆ ಮೂಲಕ ಸಂವಿಧಾನವನ್ನು ಅಮಾ ನತಿನಲ್ಲಿ ಇರಿಸಿದ್ದರು. ಆದರೆ ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡರು. ಆದರೆ ಇಂದು ಆಳುವವರು ಅಹಂನಲ್ಲಿ ಮೆರೆಯುತ್ತಿದ್ದಾರೆ. ಇನ್ನಾದರೂ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ತಲೆಮಾರು ಜೀತದಾಳುಗಳಾಗಿ ಬದುಕ ಬೇಕಾದೀತು ಎಂದರು.

ಮಹಾತ್ಮಾ ಗಾಂಧೀಜಿಯವರು ಮಂಗಳೂರಿಗೆ ಮೂರು ಬಾರಿ ಭೇಟಿ ನೀಡಿದ್ದ ಈ ಮಣ್ಣಿನಲ್ಲಿ ಇಂದು ಮೂಲ ಭೂತವಾದ ವಿಜೃಂಭಿಸುತ್ತಿದೆ ಎಂದರು.
ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ| ವೂಡೇ ಪಿ. ಕೃಷ್ಣ ದಿಕ್ಸೂಚಿ ಭಾಷಣ ಮಾಡಿ, ಗಾಂಧೀಜಿಯವರಂತಹ ಒಬ್ಬ ನಾಯಕ ಸ್ವಾತಂತ್ರ್ಯದ ಬಳಿಕ ನಮಗೆ ಸಿಕ್ಕಿಲ್ಲ ಎನ್ನುವುದು ನಮ್ಮ ಪ್ರಜಾಪ್ರಭುತ್ವದ ನಿಜವಾದ ಸವಾಲು. ಗಾಂಧಿ  ಮನಸ್ಸಿನ ಯುವಕರನ್ನು ತಯಾರು ಮಾಡುವ ಜವಾಬ್ದಾರಿ ಹಿರಿಯರ ಮುಂದೆ ಇದೆ. ಇದನ್ನು ಪಾಲಿಸಬೇಕಿದೆ ಎಂದು ಅವರು ಹೇಳಿದರು.

Advertisement

ಕೃತಿ ಬಿಡುಗಡೆ: “ಆನ್‌ ದ ಟ್ರೈಲ್‌ ಆಫ್‌ ಗಾಂಧಿ’ಸ್‌ ಫುಟ್‌ಸ್ಟೆಪ್ಸ್‌’ ಮತ್ತು “ಬಿಫೋರ್‌ ಐ ರಿಟರ್ನ್ ಟು ದಿ ಸಾಯಿಲ್‌’ ಕೃತಿಗಳನ್ನು ನಿಟ್ಟ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ ಬಿಡುಗಡೆಗೊಳಿಸಿ, ನಾವು ಟೀಕೆ ಮಾಡುವ ಬದಲು ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವುದು ಅಗತ್ಯ. ಗಾಂ ಧೀಜಿಯವರ ಸಂದೇಶ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ದೇಶಕ್ಕೆ ಏನು ಮಾಡಬಹುದು ಎನ್ನುವುದನ್ನು ಯುವ ಸಮುದಾಯಕ್ಕೆ ನಾವು ತಿಳಿಸಿಕೊಡಬೇಕು ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಲ್‌. ಧರ್ಮ ಅಧ್ಯಕ್ಷತೆ ವಹಿಸಿದ್ದರು. ವಿವಿ ಕಾಲೇಜು ಪ್ರಾಂಶುಪಾಲ ಪ್ರೊ| ಗಣಪತಿ ಗೌಡ, ಮಂಗಳೂರು ವಿವಿ ಎನ್ನೆಸ್ಸೆಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ| ಶೇಷಪ್ಪ ಕೆ. ಉಪಸ್ಥಿತರಿದ್ದರು.

ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಸಂಸ್ಥಾಪಕ ಪ್ರಮೋದ್‌ ಕುಮಾರ್‌ ರೈ ಪ್ರಸ್ತಾವಿಸಿ, ಸ್ವಾಗತಿಸಿದರು. ಅಭಿಷೇಕ್‌ ಶೆಟ್ಟಿ ನಿರೂಪಿಸಿದರು.

ಇದನ್ನೂ ಓದಿ: Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Advertisement

Udayavani is now on Telegram. Click here to join our channel and stay updated with the latest news.

Next