Advertisement

ಮಂಗಳೂರು : ಮಾನಹಾನಿ ಪ್ರಕರಣಕ್ಕೆ ತಡೆ, ಡಾ.ಕಕ್ಕಿಲ್ಲಾಯಗೆ ನೋಟಿಸ್‌

10:51 PM Jun 30, 2022 | Team Udayavani |

ಮಂಗಳೂರು : ಐಎಂಎ ಮಂಗಳೂರು ಘಟಕದ ಪದಾಧಿಕಾರಿಗಳ ವಿರುದ್ಧ ಮಂಗಳೂರಿನ ವೈದ್ಯರಾದ ಡಾ| ಬಿ.ಎಸ್‌. ಕಕ್ಕಿಲ್ಲಾಯ ಹೂಡಿರುವ ಮಾನಹಾನಿ ಪ್ರಕರಣಕ್ಕೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಜಿಲ್ಲಾ ನ್ಯಾಯಾಲಯದಲ್ಲಿ ಡಾ| ಕಕ್ಕಿಲ್ಲಾಯ ಹೂಡಿರುವ ಮಾನಹಾನಿ ದಾವೆಯ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಐಎಂಎ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ . ನಾಗಪ್ರಸನ್ನ ಅವರು ಪ್ರತಿವಾದಿ ಡಾ| ಕಕ್ಕಿಲ್ಲಾಯ ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್‌ 26ಕ್ಕೆ ಮುಂದೂಡಿದ್ದಾರೆ.

ಕೋವಿಡ್‌ ನಿರ್ಬಂಧ ಜಾರಿಯಲ್ಲಿದ್ದ ಅವಧಿಯಲ್ಲಿ ಮಾಸ್ಕ್ ಇಲ್ಲದೇ ಸೂಪರ್‌ ಮಾರ್ಕೆಟ್‌ನಲ್ಲಿ ಡಾ| ಕಕ್ಕಿಲ್ಲಾಯ ಅವರು ಪ್ರವೇಶಿಸಿದ ಸಂದರ್ಭ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮೂಲತಃ ವೈದ್ಯರಾಗಿರುವ ಕಕ್ಕಿಲ್ಲಾಯ ಅವರ ವರ್ತನೆ ಬಗ್ಗೆ ಮಾಧ್ಯಮದವರು ಐಎಂಎ ಪದಾಧಿಕಾರಿಗಳನ್ನು ಪ್ರಶ್ನಿಸಿದಾಗ, ಮಾಸ್ಕ್ ಇಲ್ಲದೇ ಸೂಪರ್‌ ಮಾರ್ಕೆಟ್‌ಗೆ ತೆರಳಿದ್ದು ತಪ್ಪು ಎಂದು ಉತ್ತರಿಸಿದ್ದರು.

ಇದರ ವಿರುದ್ಧ ಡಾ| ಕಕ್ಕಿಲ್ಲಾಯ, ಮಂಗಳೂರು ಐಎಂಎ ಪದಾಧಿಕಾರಿಗಳು, ರಾಜ್ಯ ಐಎಂಎ ವೈದ್ಯರ ಕಿರುಕುಳ ತಡೆ ಸಮಿತಿಯ ಅಧ್ಯಕ್ಷ ಡಾ| ಗಣೇಶ್‌ ಪ್ರಸಾದ್‌ ಮುದ್ರಾಜೆ ಮತ್ತಿತರರ ವಿರುದ್ಧ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದರು. ಈ ದಾವೆಯ ವಿಚಾರಣೆ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಡಾ| ಮುದ್ರಜೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಕೆದಂಬಾಡಿ ಡಿ. ಕೃಷ್ಣಮೂರ್ತಿ ವಾದಿಸಿದ್ದರು.

ಇದನ್ನೂ ಓದಿ : ಮ್ಯಾನೇಜ್‍ಮೆಂಟ್ ಕೋಟಾ; ರಾಷ್ಟ್ರ ಮಟ್ಟದ ಸಿಇಟಿ ನಡೆಸಲು ಸಿದ್ಧ: ಡಾ.ಅಶ್ವತ್ಥನಾರಾಯಣ

Advertisement
Advertisement

Udayavani is now on Telegram. Click here to join our channel and stay updated with the latest news.

Next