Advertisement

ನಗರದಲ್ಲಿ ಮುಂದುವರಿದ ಮಳೆ: ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ

12:35 PM Aug 10, 2019 | Naveen |

ಮಹಾನಗರ: ದ.ಕ. ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ನಗರದಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದೆ.

Advertisement

ಶುಕ್ರವಾರ ಬೆಳಗ್ಗಿನಿಂದಲೇ ಆರಂಭ ಗೊಂಡಿದ್ದ ಜಿಟಿ ಜಿಟಿ ಮಳೆ ಮಧ್ಯಾಹ್ನ ವೇಳೆಗೆ ತುಸು ಕಡಿಮೆಯಾಗಿತ್ತು. ಬಳಿಕ ಬಿಟ್ಟು ಬಿಟ್ಟು ಮಳೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿತ್ತು.

ನಗರದ ಬಿಜೈ ಬಳಿ ರಸ್ತೆಗೆ ಮರ ಬಿದ್ದು, ಕೆಲವು ಕಾಲ ವಾಹನ ಸಂಚಾರ ವ್ಯತ್ಯಯವಾಗಿತ್ತು. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮರ ತೆರವು ಮಾಡಿದರು.

ಸಂಚಾರಕ್ಕೆ ತೊಂದರೆ

ಶುಕ್ರವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಪಡೀಲು ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ನಗರದ ಕೊಟ್ಟಾರ, ಕುದ್ರೋಳಿ, ಕೊಟ್ಟಾರಚೌಕಿ, ಮಣ್ಣಗುಡ್ಡೆ, ಕುದ್ರೋಳಿ, ಡೊಂಗರಕೇರಿ, ಅಳಕೆ ಮತ್ತಿತರ ಪ್ರದೇಶಗಳಲ್ಲಿ ನೀರು ನಿಂತು, ಕೃತಕ ನೆರೆ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

Advertisement

ಬೆಳಗ್ಗೆ ಕೆಲಸಕ್ಕೆಂದು ತೆರಳುವ ಸಮಯದಲ್ಲಿ ಭಾರೀ ಮಳೆಯಾಗಿದ್ದು, ಇದರಿಂದಾಗಿ ನಗರದ ಜ್ಯೋತಿ ವೃತ್ತ, ಬಂಟ್ಸ್‌ ಹಾಸ್ಟೆಲ್, ಸ್ಟೇಟ್ಬ್ಯಾಂಕ್‌, ಪಂಪ್‌ವೆಲ್, ನಂತೂರು, ಕಂಕನಾಡಿ, ಪಿ.ವಿ.ಎಸ್‌. ವೃತ್ತ, ಕೊಟ್ಟಾರ ಚೌಕಿ, ಹಂಪನಕಟ್ಟೆ ಇನ್ನಿತರ ಪ್ರದೇಶಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಹಬ್ಬದ ಸಂದರ್ಭಸಲ್ಲಿ ವಿವಿಧೆಡೆಗಳಿಗೆ ತೆರಳುವವರಿಗೆ ಸಮಸ್ಯೆ ಉಂಟಾಯಿತು.

ಹವಾಮಾನ ಇಲಾಖೆಯ ಅಂಕಿ ಅಂಶದ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ಕರಾವಳಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. .

ಸುರತ್ಕಲ್: ದಿನವಿಡೀ ಮಳೆ; ಮತ್ತೆ ಭೋರ್ಗರೆದ ಸಮುದ್ರ

ಸುರತ್ಕಲ್: ಸುರತ್ಕಲ್, ಪಣಂಬೂರು ಸಹಿತ ಗ್ರಾಮಾಂತರ ಪ್ರದೇಶದಲ್ಲಿ ಶುಕ್ರ ವಾರ ಬಿರುಸಿನ ಮಳೆಯಾಗಿದೆ.

ಚಿತ್ರಾಪುರ, ಬೈಕಂಪಾಡಿ ಕಡಲತೀರದಲ್ಲಿ ಸಮುದ್ರ ಭೋರ್ಗರೆದಿದ್ದು ಮತ್ತು ಭೂಮಿ ಯನ್ನು ಕೊರೆಯತೊಡಗಿದೆ. ಶುಕ್ರವಾರ ಮನೆಗಳನ್ನು ಉಳಿಸುವ ಸಲುವಾಗಿ ಚಿತ್ರಾಪುರ ಭಾಗದಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ಆದೇಶ ಮೇರೆಗೆ ಕಪ್ಪು ಕಲ್ಲುಗಳನ್ನು ಸಮುದ್ರ ತೀರದಲ್ಲಿ ಹಾಕಲಾಗಿದೆ.

ತುರ್ತು ಕಾಮಗಾರಿಯಿಂದ ಎರಡು ಬಡ ಕುಟುಂಬಗಳ ಮನೆಗಳು ಸದ್ಯಕ್ಕೆ ಸಮುದ್ರ ಪಾಲಾಗುವುದು ತಪ್ಪಿದಂತಾಗಿದೆ. ಹೆದ್ದಾರಿಯಲ್ಲಿ ವಾಹನಗಳು ಹಗಲಿನಲ್ಲಿಯೇ ದೀಪ ಬೆಳಗಿಸುತ್ತಾ ಮುಂಜಾಗ್ರತೆಯಿಂದ ಚಲಿಸುತ್ತಿರುವುದು ಕಂಡು ಬಂತು. ವಿವಿಧ ತಗ್ಗು ಪ್ರದೇಶದಲ್ಲಿ ನೀರು ನಿಂತರೂ ಹೆಚ್ಚಿನ ಹಾನಿ ಸಂಭವಿಸಿಲ್ಲ.

ದ.ಕ. ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ನಗರದಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದೆ.

Udayavani is now on Telegram. Click here to join our channel and stay updated with the latest news.

Next