ಮಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ರಾತ್ರಿ ಅಕ್ರಮ ಚಿನ್ನಾಭರಣ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ.
ಟಾಯ್ಲೆಟ್‌ನಲ್ಲಿ ಬಚ್ಚಿಡಲಾಗಿದ್ದು, 34.17 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ದುಬೈ ನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನೊಬ್ಬ ನಿರ್ಗಮನ ದ್ವಾರದ ಬಳಿ ಇರುವ ಟಾಯ್ಲೆಟ್‌ನಲ್ಲಿ ಚಿನ್ನಾಭರಣದು ಪ್ಯಾಕೆಟ್ ಎಸೆದು ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಸ್ವಚ್‌ಛತೆ ಮಾಡುವವರ ಬಳಿ ಈ ಚಿನ್ನಾಭರಣವನ್ನು ಪಡೆದುಕೊಳ್ಳುವ ಇರಾದೆ ಹೊಂದಿದ್ದ ಎನ್ನಲಾಗಿದೆ.
ಅಧಿಕಾರಿಳು 10 ಚಿನ್ನದ ಬಿಸ್ಕತ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.