Advertisement
ದೂರುದಾರರು ಜೂ.13ರಂದು ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸಕ್ಕೆಂದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅವರಿಗೆ ಅದೇ ದಿನ ಅಪರಿಚಿತ ವ್ಯಕ್ತಿ 9598520567ನಿಂದ ಕರೆ ಮಾಡಿ 1,500 ರೂ.ಗಳನ್ನು ಪಾವತಿಸಿ ಹೆಸರು ನೋಂದಾಯಿಸುವಂತೆ ತಿಳಿಸಿದ. ಅದರಂತೆ ದೂರುದಾರರು ಗೂಗಲ್‌ಪೇ ಮೂಲಕ ಹಣ ಪಾವತಿಸಿದರು. ಮರುದಿನ ಇಂಟರ್‌ವ್ಯೂಗೆ ಎಂದು 6,000 ರೂ. ಪಡೆದುಕೊಂಡ. ಅನಂತರ ತರಬೇತಿ, ಕೊರಿಯರ್ ಚಾರ್ಜ್, ಇನ್ಸೂರೆನ್ಸ್ ಇತ್ಯಾದಿ ಕಾರಣಗಳನ್ನು ಹೇಳಿ ಒಟ್ಟು 56,600 ರೂ.ಗಳನ್ನು ಪಡೆದುಕೊಂಡು ಮೋಸ ಮಾಡಿದ್ದಾನೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. Advertisement
Mangaluru: ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚನೆ
10:40 PM Jul 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.