Advertisement

ಮೋದಿ- ಇಮ್ರಾನ್‌ ಖಾನ್‌ ಒಂದೇ ತಾಯಿಯ ಮಕ್ಕಳು; ಅವರೂ ಸರಿಯಲ್ಲ, ಇವರೂ ಸರಿಯಲ್ಲ: ರಮಾನಾಥ ರೈ

01:46 PM Sep 08, 2019 | Naveen |

ಮಂಗಳೂರು: ನರೇಂದ್ರ ಮೋದಿ ಮತ್ತು ಇಮ್ರಾನ್‌ ಖಾನ್ ಇಬ್ಬರೂ ಒಂದೇ ತಾಯಿಯ ಮಕ್ಕಳು, ಇಬ್ಬರೂ ಒಂದೇ ರೀತಿಯವರು. ಪಾಕಿಸ್ಥಾನದಲ್ಲಿ ಚುನಾವಣೆ ಗೆಲ್ಲಲು ಇಮ್ರಾನ್ ಖಾನ್ ಭಾರತವನ್ನು ಬೈಯುತ್ತಾರೆ. ಭಾರತದಲ್ಲಿ ಚುನಾವಣೆ ಗೆಲ್ಲಲು ಮೋದಿ ಪಾಕಿಸ್ತಾನವನ್ನು ಬೈಯುತ್ತಾರೆ ಎಂದು ಮಾಜಿ ಸಚಿವ ರಮಾನಾಥ ರೈ ಕಿಡಿಕಾಡಿದ್ದಾರೆ.

Advertisement

ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡರೂ ಯಾವುದೇ ಭಾಗಕ್ಕೆ ಮೋದಿ ಭೇಟಿ ನೀಡಿಲ್ಲ. ಆದರೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಮಾತ್ರ ಮೋದಿ ಬ್ಯುಸಿ ಇದ್ದಾರೆ ಎಂದು ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next