Advertisement

Mangaluru: ಡ್ರಗ್ಸ್‌ ಸೇವನೆ; ಯುವಕನ ಬಂಧನ

08:31 PM Oct 22, 2024 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು (ಡ್ರಗ್ಸ್‌) ಸೇವನೆ ಮಾಡಿದ ಆರೋಪದಲ್ಲಿ ನಗರದ ಪೂರ್ವ ಠಾಣೆಯ ಪೊಲೀಸರು ಯುವಕನೋರ್ವನನ್ನು ಸೋಮವಾರ ಬಂಧಿಸಿದ್ದಾರೆ.

Advertisement

ಕೇರಳ ವಯನಾಡಿನ ಸುಲ್ತಾನ್‌ ಬತ್ತೇರಿಯ ಅಮಾಲ್‌ ಮಾನಸ್‌ (30) ಬಂಧಿತ. ಸೋಮವಾರ ರಾತ್ರಿ 7 ಗಂಟೆಗೆ ನಗರದ ಪಂಪ್‌ವೆಲ್‌ ಜಂಕ್ಷನ್‌ ಬಳಿ ಮಾದಕ ವಸ್ತು ಸೇವಿಸಿದಂತೆ ಕಂಡುಬಂದಿದ್ದ ಈತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next