Advertisement

Mangaluru; ಆಟೋದಲ್ಲಿ ಮಾದಕ ವಸ್ತು ಮಾರಾಟ: ಆರೋಪಿ ಅರೆಸ್ಟ್

07:43 PM Jan 19, 2024 | Team Udayavani |

ಮಂಗಳೂರು: ಆಟೋ ರಿಕ್ಷಾದಲ್ಲಿ ಮಾದಕವಸ್ತು (MDMA) ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಸಿಸಿಬಿ ಪೊಲೀಸರು ಜ.18 ರಂದು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿ ತೌಸೀಫ್ ಅಲಿಯಾಸ್ ತೌಚಿ (23) ಎಂಬಾತನಾಗಿದ್ದು,ಮಂಗಳೂರು ಬಜಾಲ್ ನಂತೂರು ಕೆಳಗಿನ ಮನೆ ನಿವಾಸಿಯಾಗಿದ್ದಾನೆ.ಆರೋಪಿಯಿಂದ 45 ರೂ. ಮೌಲ್ಯದ 9 ಗ್ರಾಂ MDMA ಮಾದಕ ವಸ್ತು, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ, ಆಟೋರಿಕ್ಷಾ ಸಹಿತ ಒಟ್ಟು 5,11,000 ರೂ ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದಾರೆ.

ಪಳ್ನೀರುರ್ ನ ಎಸ್.ಎಲ್ ಮಥಾಯಿಸ್ ರಸ್ತೆಯ ಕೊಯಿಲೊ ಲೇನ್ ಬಳಿ ಆಟೋ ರಿಕ್ಷಾದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next