Advertisement

Mangaluru ಮಾದಕ ವಸ್ತು ಸೇವನೆ; ಇಬ್ಬರು ವಶಕ್ಕೆ

12:51 AM Aug 02, 2024 | Team Udayavani |

ಮಂಗಳೂರು: ಸಾರ್ವಜನಿಕ ಪ್ರದೇಶದಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ಇಬ್ಬರನ್ನು ಬರ್ಕೆ ಮತ್ತು ಉರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಲಾಲ್‌ಭಾಗ್‌ ಬಳಿ ಅಮಲು ಪದಾರ್ಥ ಸೇವನೆ ಮಾಡಿ ತೂರಾಡುತ್ತಿದ್ದ ಕಾಸರಗೋಡು ಹೊಸದುರ್ಗ ಕಡಪುರಂ ನಿವಾಸಿ ಅಜಾಸ್‌ ಕೆ. (20)ನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಟೆಟ್ರಾಹೈಡ್ರಾಕೆನಬಿನಾಯ್ಡ ಎನ್ನುವ ಮಾದಕ ವಸ್ತು ಸೇವೆ ಮಾಡಿರುವುದು ದೃಢಪಟ್ಟಿದೆ. ಚಿಲಿಂಬಿಗುಡ್ಡೆ ಮೈದಾನದ ಬಳಿ ಗಾಂಜಾ ಸೇದುತ್ತಿದ್ದ ಕಲ್ಬಾವಿ ರೋಡ್‌ ಸಂಕಪ್ಪ ಕಾಂಪೌಂಡ್‌ ನಿವಾಸಿ ಪ್ರೀತಂ ಯಾನೆ ಅಭಿ (33)ನನ್ನು ಉರ್ವ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next