Advertisement
ರಾಷ್ಟ್ರಧ್ವಜಾರೋಹಣ ಮಾಡಿ ಮಾತ ನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸ್ಕಾರಯುತ ಜೀವನ ನಡೆಸುವ ಉದ್ದೇಶದಿಂದ ಸಾಹಿತ್ಯ ಪ್ರೀತಿಯನ್ನು ಮಕ್ಕಳಲ್ಲಿ ಮೂಡಿಸುವುದು ಅಗತ್ಯ ಎಂದರು.
Related Articles
Advertisement
ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಪಾಲಿಕೆ ಆಯುಕ್ತ ಮೊಹಮ್ಮದ್ ನಜೀರ್, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಜಿ.ಕೆ. ಭಟ್ ಸೇರಾಜೆ, ಸಾಹುಲ್ ಹಮೀದ್, ಮೊಹಮ್ಮದ್ ಮುಕ್ಕಚೇರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ‘ಕಾವ್ಯ ಮೃಷ್ಟಾನ್ನ’ ಪುಸ್ತಕವನ್ನು ಬಿಡುಗಡೆ ಮಾಡಿ ಉಚಿತವಾಗಿ ನೀಡಲಾಯಿತು.
ಸಮ್ಮೇಳನದಲ್ಲಿ ಮಾಜಿ ರಕ್ಷಣಾ ಸಚಿವರಿಗೆ ಸಂತಾಪಮಂಗಳವಾರ ನಿಧನ ಹೊಂದಿದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರಿಗೆ ನಗರನದ ಪುರಭವನದಲ್ಲಿ ನಡೆದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನ ಸಮಾರಂಭದ ಮುನ್ನ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಾಹಿತ್ಯ ಸಮ್ಮೇಳನ ಮೆರವಣಿಗೆಗೆ ಚಾಲನೆ
ಕನ್ನಡ ಭುವನೇಶ್ವರಿ ದಿಬ್ಬಣಕ್ಕೆ ಜಾನಪದ ಕಲಾತಂಡಗಳು ಮೆರುಗು ನೀಡಿದವು. ಮಾಜಿ ಸಚಿವ ಅಮರನಾಥ ಶೆಟ್ಟಿ ಚಾಲನೆ ನೀಡಿದರು. ಸಮ್ಮೇಳನಾಧ್ಯಕ್ಷ ಬಿ.ಎಂ.ಹೆಗ್ಡೆ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಪುರಾಣಿಕ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರಿದ್ದರು. ಮೆರವಣಿಗೆಯು ಬಂಟ್ಸ್‌ಹಾಸ್ಟೆಲ್ ಆವರಣದಿಂದ ಅಂಬೇಡ್ಕರ್ ವೃತ್ತ-ಯು.ಪಿ. ಮಲ್ಯ ರಸ್ತೆ ಮೂಲಕ ಪುರಭವನಕ್ಕೆ ತಲುಪಿತು. ವಿವಿಧ ಪ್ರೌಢಶಾಲೆ ವಿದ್ಯಾರ್ಥಿ ಗಳು ಮತ್ತು ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಂದಿನ ವಿವಿಧ ಗೋಷ್ಠಿಗಳು
ಜ. 30ರಂದು ಬೆಳಗ್ಗೆ 9 ಗಂಟೆಗೆ ‘ಮಂಗಳೂರು: ಇತಿಹಾಸ – ಪ್ರಗತಿಯ ಹೆಜ್ಜೆಗಳು’ ಗೋಷ್ಠಿ, 10.45ಕ್ಕೆ ಕವಿಗೋಷ್ಠಿ, ಮಧ್ಯಾಹ್ನ 12.05ರಿಂದ ‘ಸ್ಮರಣೀಯ ಸಾಧಕರು’ಗೋಷ್ಠಿ, 1.45ಕ್ಕೆ ‘ತುಳು ಸ್ವರ ಮಂಟಮೆ – ಮಹಾ ಮಸ್ತಕಾಭಿಷೇಕ’ ವಿಶೇಷ ಉಪನ್ಯಾಸ ನಡೆಯಲಿದೆ. 2.30ರಿಂದ ‘ವೈದ್ಯಕೀಯ -ಬದುಕು ಬರಹ’ ಗೋಷ್ಠಿ, ಸಂಜೆ 4.30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಹಾಗೂ 5.20ಕ್ಕೆ ‘ದಕ್ಷಿಣ ಕನ್ನಡ-ಪ್ರಚಲಿತ ವಿದ್ಯಮಾನಗಳು’ ಗೋಷ್ಠಿ ನಡೆಯಲಿದೆ.