Advertisement

Mangaluru: ಮತ್ತೆ 10 ಮಂದಿಯ ಗಡಿಪಾರು

09:28 AM Mar 21, 2024 | Team Udayavani |

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಿಮಿನಲ್‌ ಕೇಸ್‌ ಹೊಂದಿದ್ದವರ ಗಡೀಪಾರು ಪ್ರಕ್ರಿಯೆ ಮುಂದುವರಿದಿದೆ. ಬುಧವಾರ ಮತ್ತೆ 10 ಮಂದಿಯನ್ನು ಗಡೀಪಾರು ಮಾಡಿ ಮಂಗಳೂರು ಪೊಲೀಸ್‌ ಕಮಿಷನರ್‌ ಆದೇಶಿಸಿದ್ದಾರೆ.

Advertisement

ಅಶಾಂತಿ ಸೃಷ್ಟಿ, ಹಲ್ಲೆ, ದೊಂಬಿ, ಕ್ರಿಮಿನಲ್‌ ಸಂಚು ಹೂಡುವಿಕೆ, ಕೊಲೆ ಯತ್ನ ಇತ್ಯಾದಿ ಪ್ರಕರಣಗಳನ್ನು ಹೊಂದಿರುವವರನ್ನು ಗಡೀಪಾರು ಮಾಡಲಾಗಿದೆ.

ಕಸಬಬೆಂಗ್ರೆಯ ಮೊಹಮ್ಮದ್‌ ಸುಹೈಲ್‌ (21), ಕಣ್ಣೂರು ಕೊಡಕ್ಕಲ್‌ನ ನಿಕ್ಷಿತ್‌ ಪೂಜಾರಿ (21), ಉಳ್ಳಾಲ ಸೋಮೇಶ್ವರದ ಸುನಿಲ್‌ (24), ಉಳ್ಳಾಲ ಬಸ್ತಿಪಡುವಿನ ಯತೀಶ್‌ (46), ಮೂಲ್ಕಿ ಕಾರ್ನಾಡು ಬಿಜಾಪುರ ಕಾಲನಿಯ ಧರ್ಮಲಿಂಗ (34), ಕಣ್ಣೂರಿನ ಮೊಹಮ್ಮದ್‌ ಹನೀಜ್‌ (32), ಮೂಲ್ಕಿ ಚಿತ್ರಾಪುರದ ತೇಜಪಾಲ್‌ ಆರ್‌. ಕುಕ್ಯಾನ್‌ (40), ವಾಮಂಜೂರು ಉಳಾçಬೆಟ್ಟು ಮೊಹಮ್ಮದ್‌ ಅನ್ಸಾರ್‌ (31), ಪಾಂಡೇಶ್ವರ ಶಿವನಗರದ ಅಭಿಶೇಕ್‌ (29) ಗಡೀಪಾರಿಗೊಳಗಾದವರು.

ಇದುವರೆಗೆ 26 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಶಾಂತಿಯುತ ಚುನಾವಣೆ ನಡೆಯುವುದಕ್ಕಾಗಿ ಇವರೆಲ್ಲರನ್ನೂ ವಿವಿಧ ಜಿಲ್ಲೆಗಳಿಗೆ ಗಡೀಪಾರು ಮಾಡಲಾಗಿದೆ. ಅಲ್ಲದೆ ಶಾಂತಿಕಾಪಾಡುವುದು, ಉತ್ತಮ ವರ್ತನೆಗಾಗಿ 381 ಮಂದಿಯಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next