Advertisement

‘ದೀಪಾವಳಿ ನಾಡಹಬ್ಬವಾಗಿ ಆಚರಿಸುವಂತಾಗಲಿ’

10:56 AM Nov 08, 2018 | Team Udayavani |

ಮಹಾನಗರ: ದೀಪಾವಳಿ ಸರ್ವಧರ್ಮಗಳ ಹಬ್ಬವಾಗಿದೆ ಇದನ್ನು ನಾಡಹಬ್ಬವಾಗಿ ಆಚರಿಸುವಂತಾಗಬೇಕು ಸರ್ವಧರ್ಮಗಳೇ ನಮ್ಮ ಜೀವನದ ಪದ್ಧತಿ ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಕೆ. ಅನಂತ ಪದ್ಮನಾಭ ಆಸ್ರಣ್ಣ ಅವರು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರ ನೇತೃತ್ವದಲ್ಲಿ ಮಂಗಳವಾರ ಭಾವೈಕ್ಯತೆಯ ಸರ್ವ ಧರ್ಮಗಳ ಸಂಗಮ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸರ್ವಧರ್ಮಗಳ ಒಗ್ಗೂಡುವಿಕೆಯೇ ನಮ್ಮ ಒಗ್ಗಟ್ಟು ದೀಪಾವಳಿ ಯನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯ ಬೇಕು. ಮೂರು ವರ್ಷಗಳಿಂದ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತಸ ತಂದಿದ್ದು, ಇದೊಂದು ಸಮಾಜಕ್ಕೆ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ದೀಪಾವಳಿ ಔಚಿತ್ಯತೆ ಮತ್ತು ನಮ್ಮ ಸಂಸ್ಕೃತಿಯು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಹಕಾರಿಯಾಗುವುದು. ಸಮಾಜದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಸಮಾಜದ ಒಳಿತಿಗಾಗಿ ನಡೆಯ ಬೇಕೇ ಹೊರತು ಅದರಿಂದ ಕೆಡುಕು ಆಗಬಾರದು ಎಂದು ನುಡಿದರು.

ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ.ಎಸ್‌. ಮಹಮ್ಮದ್‌ ಮಸೂದ್‌ ಮಾತನಾಡಿ, ಸರ್ವಧರ್ಮಗಳ ಸಂಗಮ ಸರ್ವಧರ್ಮಗಳ ಒಗ್ಗೂಡುವಿಕೆ, ಹಬ್ಬಗಳ ಆಚರಣೆಯಿಂದ ಎಲ್ಲರ ಒಟ್ಟುಗೂಡಿಸುವಲ್ಲಿ ಸಹಕಾರಿಯಾಗುತ್ತದೆ. ದೀಪಾವಳಿ ಹಬ್ಬವು ಎಲ್ಲ ಧರ್ಮಗಳನ್ನು ಒಗ್ಗೂಡಿಸಿ ಶಾಸಕರು ಒಗ್ಗಟ್ಟನ್ನು ಮೆರೆದಿದ್ದಾರೆ ಎಂದು ಶ್ಲಾಘಿಸಿದರು. ಪಾಲಿಕೆ ಮೇಯರ್‌ ಭಾಸ್ಕರ್‌ ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಸ್ಪರ್ಧೆಗೆಳಿಗೆ ಚಾಲನೆ
ಚಿತ್ರಕಲಾ ಸರ್ಧೆಗೆ ಸುನಿಲ್‌ ಆಚಾರ್‌ ಚಾಲನೆ ನೀಡಿದರು. ಇದೇ ವೇಳೆ ಗೂಡುದೀಪ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳು ನಡೆದವು. ಸಮಾರಂಭದಲ್ಲಿ ಸುಮಾರು 1,000 ಮಂದಿಗೆ ಅಕ್ಕಿ ವಿತರಣೆ ಮಾಡಲಾಯಿತು. ಮಾಜಿ ಶಾಸಕ ಬಿ.ಎ. ಮೊಯಿದಿನ್‌ ಬಾವ, ಮಾಜಿ ಸಚಿವ ಬಿ. ರಮಾನಾಥ ರೈ, ಕೋಡಿಜಾಲ್‌ ಇಬ್ರಾಹಿಂ, ಉದ್ಯಮಿಗಳಾದ ಸುನಿಲ್‌ ಪಾಯಸ್‌, ಮೋಹನ್‌ ಪಿ., ಕೆ.ಜೆ. ಸಿರಾಜ್‌ ಮನಪಾ ಮುಖ್ಯ ಸಚೇತಕರಾದ ಎಂ. ಶಶಿಧರ್‌ ಹೆಗ್ಡೆ, ಹೇಮನಾಥ ಶೆಟ್ಟಿ ಪುತ್ತೂರು, ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷರಾದ ನವೀನ್‌ ಡಿ’ಸೋಜಾ, ಕವಿತಾ, ವಾಸು, ಕೇಶವ ಮರೋಳಿ, ಲತಾ ಸಾಲ್ಯಾನ್‌ ಜಯರಾಮ್‌ ಶೇಖಾ, ಎಲ್ಲ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು ಸ್ಥಳೀಯ ನಾಯಕರು, ಅಧಿಕಾರಿಗಳು ಮನಪಾ ಸದಸ್ಯರು, ವಿವಿಧ ಉದ್ಯಮಿಗಳು, ಧಾರ್ಮಿಕ ನಾಯಕರು ಭಾಗವಹಿಸಿದ್ದರು. ಅರ್ಪಿತಾ ಶೆಟ್ಟಿ ನಿರೂಪಿಸಿದರು. ಜೆ. ನಾಗೇಂದ್ರ ಕುಮಾರ್‌ ವಂದಿಸಿದರು. ಈ ವೇಳೆ ಡಾ| ಮಚ್ಚೇಂದ್ರನಾಥ್‌ ಮಂಗಳಾದೇವಿ ಅವರನ್ನು ಸಮ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next