Advertisement

ಮಂಗಳೂರು ದಸರಾಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ : ಸಚಿವ ವಿ. ಸುನಿಲ್‌ ಕುಮಾರ್‌

11:11 AM Sep 12, 2022 | Team Udayavani |

ಮಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಮಂಗಳೂರು ದಸರಾ ಕೂಡ ವೈಭವವನ್ನು ಪಡೆದುಕೊಂಡಿದ್ದು, ರಾಜ್ಯದ ಪ್ರತಿಷ್ಠಿತ ಉತ್ಸವವಾಗಿದೆ. ಮಂಗಳೂರು ದಸರಾವನ್ನು ಈ ಬಾರಿ ವೈಭವದಿಂದ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

Advertisement

ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ಅವರು, ವಿಶೇಷ ಆಕರ್ಷಣೆಯಾಗಿರುವ ರಾಜಬೀದಿ ಅಲಂಕಾರ / ಬೀದಿ ದೀಪಾಲಂಕಾರವನ್ನು ಮಹಾನಗರಪಾಲಿಕೆ ಕಳೆದ ಬಾರಿಯಿಂದ ವಹಿಸಿಕೊಂಡಿದೆ. ನಗರದಲ್ಲಿ ಬಾಕಿ ಉಳಿದ ಸ್ಮಾರ್ಟ್‌ ಸಿಟಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲು ಸೂಚನೆ ನೀಡಲಾಗಿದೆ ಎಂದರು.

ಜಾನಪದ ತಂಡಗಳ ಮೆರುಗು
ದಸರಾ ಮೆರವಣಿಗೆ ಅ. 5ರಂದು ನಡೆಯಲಿದ್ದು, ಅದಕ್ಕೆ ರಾಜ್ಯದ ನಾನಾ ಜಿಲ್ಲೆಗಳ ಕಲಾತಂಡಗಳನ್ನು ಆಹ್ವಾನಿಸಲಾಗುವುದು. ಇದರಿಂದ ರಾಜ್ಯದ ಜಾನಪದ ಕಲೆಗಳ ಸಮಾಗಮವಾಗಲಿದೆ ಎಂದು ಸುನಿಲ್‌ ಹೇಳಿದರು.

ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ ವೈ., ಕುದ್ರೋಳಿ ದೇಗುಲದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಟ್ರಸ್ಟಿಗಳಾದ ರವಿಶಂಕರ ಮಿಜಾರು, ಶೇಖರ ಪೂಜಾರಿ, ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ ಉಪಸ್ಥಿತರಿದ್ದರು.

ಇದನ್ನೂ ಓದಿ : ಮಳೆ-ಗಾಳಿಗೆ ಸಮುದ್ರ ಪ್ರಕ್ಷುಬ್ಧ : ಬಂದರಿನಲ್ಲಿ ಲಂಗರು ಹಾಕಿದ ಮೀನುಗಾರಿಕೆ ದೋಣಿಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next