Advertisement
ಪಿಲಿಕುಳದ ಗುತ್ತಿನ ಮನೆಯಲ್ಲಿ ಸೋಮವಾರ ಮತ್ತು ಮಂಗಳವಾರ ಜೈಲರ್ ಚಿತ್ರೀಕರಣ ಸಾಗಿತ್ತು. ಮಂಗಳವಾರ ನಟರಾದ ಶಿವರಾಜ್ ಕುಮಾರ್ ಮತ್ತು ರಜನಿಕಾಂತ್ ಅವರ ದೃಶ್ಯದ ಚಿತ್ರೀಕರಣ ಸಾಗಿತ್ತು. ಎರಡೂ ದಿನ ಗುತ್ತಿನ ಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಚಿತ್ರೀಕರಣ ಪೂರ್ಣಗೊಂಡ ಬಳಿಕ ಸಂಜೆ ಕೆಲ ಅಭಿಮಾನಿಗಳ ಜತೆ ರಜನಿಕಾಂತ್ ಅವರು ಫೋಟೋ ಕ್ಲಿಕ್ಕಿಸಿದ್ದು, ಜಾಲತಾಣದಲ್ಲಿ ವೈರಲ್ ಆಗಿತ್ತು. ರಜನಿಕಾಂತ್ ಅವರು ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದು, ಅಭಿಮಾನಿಗಳು ಸೇರಿದಂತೆ ಯಾರಿಗೂ ಅವರನ್ನು ಭೇಟಿ ಮಾಡಲು ಅವಕಾಶ ಇರಲಿಲ್ಲ.
ಮೂಲಗಳ ಪ್ರಕಾರ ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಅವರ ಇನ್ನೊಂದು ಹಂತದ ಶೂಟಿಂಗ್ ಮಂಗಳೂರಿನಲ್ಲಿ ನಡೆಯುವ ನಿರೀಕ್ಷೆ ಇದೆ. ದೇಶದ ಬೇರೆ ಬೇರೆ ಭಾಗದಲ್ಲಿ ಜೈಲರ್ ಶೂಟಿಂಗ್ ನಿಗದಿಯಾದ ಕಾರಣ ರಜನಿಕಾಂತ್ ತೆರಳಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಮಂಗಳೂರಿಗೆ ಬರುವ ನಿರೀಕ್ಷೆ ಇದೆ.